ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಲೋಕೋಪಯೋಗಿ ರಸ್ತೆ ಪ್ರಯಾಣ; ಅಸ್ತಮಾ ರೋಗಕ್ಕೆ ಆಹ್ವಾನ!

ಕುಂದಗೋಳ: ಸಂಶಿ-ಗುಡಗೇರಿ ರಸ್ತೆಯಲ್ಲಿ ಸಂಚಾರ ಮಾಡೋ ಪ್ರಯಾಣಿಕರಿಗೆ ಅಸ್ತಮಾರೋಗ, ಡಸ್ಟ್ ಅಲರ್ಜಿ ಬರೋದು ಗ್ಯಾರಂಟಿ ಎನ್ನುವ ಪ್ರಸಂಗ ಏರ್ಪಟ್ಟಿದೆ.

ಹೌದು ! ಕುಂದಗೋಳ ತಾಲೂಕಿನ ಲೋಕೋಪಯೋಗಿ ಇಲಾಖೆ 2024/25ನೇ ಸಾಲಿನ ಎಸ್.ಎಸ್.ಡಿ.ಪಿ. ಯೋಜನೆಯಡಿ ಸಂಶಿ ಗುಡಗೇರಿ 2 ಕಿಲೋಮೀಟರ್ 450 ಮೀಟರ್ ರಸ್ತೆ ಅಭಿವೃದ್ಧಿ ನಡೆಸಿ ರಸ್ತೆಗೆ ಮಣ್ಣು ಹಾಕಿ ಕೈ ಬಿಟ್ಟು ಎಷ್ಟೋ ದಿನಗಳು ಕಳೆದರೂ ಕಾಮಗಾರಿ ಮುಂದುವರೆದಿಲ್ಲಾ.

ಈ ಪರಿಣಾಮ ಈ ರಸ್ತೆ ಮೇಲೆ ಸಂಚಾರ ಮಾಡುವ ಪ್ರಯಾಣಿಕರು, ರೈತಾಪಿ ಜನರಿಗೆ ಧೂಳಿನ ಸಮಸ್ಯೆ ಅತಿಯಾಗಿ ಅಸ್ತಮಾ ಜೊತೆಗೆ ಡಸ್ಟ್ ಅಲರ್ಜಿ ರೋಗಕ್ಕೆ ತುತ್ತಾದರೂ ಆಶ್ಚರ್ಯ ಪಡಬೇಕಾಗಿಲ್ಲ.

ಇದಲ್ಲದೆ ಬೇಸಿಗೆಯಲ್ಲಿ ಉಂಟಾಗುವ ಧೂಳಿನ ನಿಯಂತ್ರಣಕ್ಕೆ ಗುತ್ತಿಗೆದಾರರು, ಲೋಕೋಪಯೋಗಿ ಇಲಾಖೆ ಕ್ರಮ ಕೈಗೊಂಡಿಲ್ಲ, ಮುಖ್ಯವಾಗಿ ರಸ್ತೆ ಅಭಿವೃದ್ಧಿ ಕಾಮಗಾರಿ ವಿಳಂಬವಾಗಿ ಜನರಿಗೆ ಸಮಸ್ಯೆ ತಂದಿದೆ.

ಬೈಟ್.1 & 2

ಒಟ್ಟಾರೆ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್, ಮುಖ್ಯ ಕಾರ್ಯ ನಿರ್ವಾಹಕ ಇಂಜಿನಿಯರ್'ಗಳು ತಾವೊಮ್ಮೆ ಈ ರಸ್ತೆ ಪ್ರಯಾಣ ಮಾಡಿದ್ರೇ ಸಾರ್ವಜನಿಕ ಗೋಳು ಅರ್ಥ ಆಗುತ್ತೆ ಎಂದು ಜನರು ಪಬ್ಲಿಕ್ ನೆಕ್ಸ್ಟ್ ಮೂಲಕ ಆಗ್ರಹ ಮಾಡಿದ್ದು, ಸಮಸ್ಯೆ ಇತ್ಯರ್ಥಕ್ಕೆ ಒತ್ತಾಯಿಸಿದ್ದಾರೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

04/02/2026 06:01 pm

Cinque Terre

2.24 K

Cinque Terre

0

ಸಂಬಂಧಿತ ಸುದ್ದಿ