ಧಾರವಾಡ: ಇದು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ಹರಿಯುವ ಬೆಣ್ಣಿ ಹಳ್ಳ. ಇದು ಹಾವೇರಿ ಜಿಲ್ಲೆಯ ಶಿಗ್ಗಾವಿಯಿಂದ ಹರಿದು ಹುಬ್ಬಳ್ಳಿ ತಾಲೂಕಿನ ಕೆಲ ಭಾಗದಲ್ಲಿ ಹಾದು ನವಲಗುಂದ ತಾಲೂಕಿಗೆ ಬಂದು ಸೇರುತ್ತದೆ. ಅಲ್ಲಿಂದ ಗದಗ ಜಿಲ್ಲೆಗೆ ಹೋಗುತ್ತದೆ. ಒಟ್ಟು 53 ಕಿಲೋ ಮೀಟರ್ ಹರಿಯುವ ಈ ಹಳ್ಳ ಅನಾಹುತ ಮಾಡಿದ್ದೇ ಹೆಚ್ಚು.
ಮಳೆಗಾಲ ಬಂದರೆ ಇಲ್ಲಿಯ ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆಯುವ ಇಡೀ ಬೆಳೆಯನ್ನೇ ಹಾಳು ಮಾಡುವ ಈ ಹಳ್ಳಕ್ಕೆ ಈಗ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ 350 ಕೋಟಿಯ ಯೋಜನೆ ರೂಪಿಸಿದೆ. ಹಳ್ಳದ ನೀರು ಹಳ್ಳ ಬಿಟ್ಟು ಹೊರಗೆ ಹೋಗದಂತೆ ಎಚ್ಚರಿಕೆ ವಹಿಸಲು ಇದರ ಹೂಳು ಎತ್ತುವುದರ ಜೊತೆಗೆ ಹಳ್ಳದ ನೀರು ಸರಾಗವಾಗಿ ಹೋಗುವಂತೆ ಕಾಮಗಾರಿ ಹಮ್ಮಿಕೊಂಡಿದೆ. ಅದಕ್ಕಾಗಿ ಇದೇ ಫೆಬ್ರವರಿ 8 ರಂದು ಸಿಎಂ ಮತ್ತು ಡಿಸಿಎಂ ಇಬ್ಬರು ಕೂಡ ಇದಕ್ಕೆ ಚಾಲನೆ ನೀಡಲು ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ.
ಬೈಟ್ 1: ಸಂತೋಷ ಲಾಡ್, ಉಸ್ತುವಾರಿ ಸಚಿವ
ಇನ್ನು ಈ ಹಳ್ಳದ ನೀರು ಹಾವೇರಿಯ ಶಿಗ್ಗಾವಿಯಲ್ಲಿ ಮಳೆಯಾದರೂ ನವಲಗುಂದ ಭಾಗಕ್ಕೆ ಬರುತ್ತದೆ. ಗೊತ್ತಿಲ್ಲದೇ ಪ್ರವಾಹ ಸೃಷ್ಟಿ ಮಾಡುವ ಈ ಹಳ್ಳದ ನೀರಿಗೆ ಅದೆಷ್ಟೋ ಜನ ಸಿಲುಕಿ ಒದ್ದಾಡಿದ ಉದಾಹರಣೆ ಕೂಡ ಇವೆ. ಹೀಗಾಗಿ ಈ ಭಾಗದ ಜನರಿಗೆ ಕೂಡ ಇದು ಶಾಶ್ವತ ಕಾಮಗಾರಿ ಆಗಬೇಕು ಎಂಬ ಆಶಯ ಇತ್ತು. ಹೀಗಾಗಿ ಈ ಹಳ್ಳದ ಕಾಮಗಾರಿ ವೇಳೆ ಯಾವುದೇ ಅಕ್ರಮ ನಡೆಯದಂತೆ ಒಳ್ಳೆಯ ಕೆಲಸ ನಡೆಯಲಿ ಎಂಬುದು ಜನರ ಆಶಯವಾಗಿದೆ. ಹಿಂದೆ ಇದೇ ಹಳ್ಳಕ್ಕೆ ಸೇರುವ ತುಪ್ಪರಿ ಹಳ್ಳದ ಕಾಮಗಾರಿ ವೇಳೆ ಅಕ್ರಮ ನಡೆದ ಉದಾಹರಣೆ ಇವೆ. ಆ ರೀತಿ ಆದರೆ ಕಾನೂನು ಹೋರಾಟ ಮಾಡುವ ಎಚ್ಚರಿಕೆಯನ್ನೂ ಹೋರಾಟಗಾರರು ನೀಡಿದ್ದಾರೆ.
ಒಟ್ಟಿನಲ್ಲಿ ಈ ಭಾಗದ ಹಲವು ವರ್ಷಗಳ ಬೇಡಿಕೆ ಈಗ ಈಡೇರುತ್ತಿದೆ. ಕಾಮಗಾರಿ ಆದಷ್ಟು ಬೇಗ ಆರಂಭವಾದರೆ ಈ ಭಾಗದ ಸಾವಿರಾರು ರೈತರ ಜಮೀನಿನಲ್ಲಿ ಬೆಳೆಯುವ ಬೆಳೆಯನ್ನು ಅವರು ಈ ಹಳ್ಳದ ಪ್ರವಾಹದಿಂದ ಉಳಿಸಿಕೊಳ್ಳಬಹುದಾಗಿದೆ.
Kshetra Samachara
04/02/2026 06:24 pm
LOADING...