ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ 'ಪರೀಕ್ಷಾ ಪಯಣ' ಸಂಕಲ್ಪ !

ನವಲಗುಂದ : ಪರೀಕ್ಷಾ ಪಯಣ ಮಾರ್ಗದರ್ಶಿ ಪುಸ್ತಕವು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಹಕಾರಿ ಆಗಲಿದೆ ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.ಪಟ್ಟಣದ ಮಾಡಲ್ ಹೈಸ್ಕೂಲ್‌ನಲ್ಲಿ ಪರೀಕ್ಷಾ ಪಯಣ ಮಾರ್ಗದರ್ಶಿ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಅಪರ ಆಯುಕ್ತರ ಕಚೇರಿ ಉಪ ನಿರ್ದೇಶಕ ಗಿರೀಶ ಪದಕಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಮಾತನಾಡಿ, ತಾಲ್ಲೂಕಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಅತ್ಯುತ್ತಮವಾಗಬೇಕು. ವಿದ್ಯಾರ್ಥಿಗಳಿಗೆ ಶಾಸಕ ಕೋನರಡ್ಡಿ ಅವರ ಸಹಾಯ, ಸಹಕಾರ ಸ್ಮರಣೀಯ ಎಂದರು.

ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎ.ಬಿ. ಕೊಪ್ಪದ ಮಾತನಾಡಿ, ಇದೊಂದು ಉತ್ತಮವಾದ ಮಾರ್ಗದರ್ಶಿ ಆಗಿದೆ. ಮಕ್ಕಳಿಗೆ ಪ್ರತಿ ವಿಷಯದ ಪ್ರಶ್ನೆಪತ್ರಿಕೆಯ ಸ್ವರೂಪದಂತೆ ಸಿದ್ಧಗೊಂಡು, ನಿಖರ ಮತ್ತು ಸ್ಪಷ್ಟವಾದ ಉತ್ತರ ಬರೆಯಲು ಪೂರಕವಾಗಿದೆ ಎಂದರು.

ಈ ವೇಳೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ ಶಿಗ್ಲಿ, ವಿ.ಡಿ.ರಂಗಣ್ಣವರ, ರೇಣುಕಾ ಮುರನಾಳ, ಜೀವನ ಪವಾರ, ದಾವಲಸಾಬ್ ಖುದ್ದಣ್ಣವರ, ಅಣ್ಣಪ್ಪ ಬಾಗಿ, ಪಿ.ಕೆ. ಹಿರೇಗೌಡ್ರ, ಸಿ.ಎಚ್. ಡೊಂಬರ, ಎಲ್.ವೈ. ರಾಯಪ್ಪನವರ, ಶಿವಾನಂದ ಬೆಂಚಿಕೇರಿ, ವಸಂತ ಚಾಕಲಬ್ಬಿ, ಡಿ.ಜಿ. ಹುಲ್ಲೂರ, ಭಾಗೀರಥಿ ಮಳಲಿ ಇದ್ದರು.

Edited By : PublicNext Desk
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

04/02/2026 12:04 pm

Cinque Terre

1.98 K

Cinque Terre

0

ಸಂಬಂಧಿತ ಸುದ್ದಿ