ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ ತಾಲೂಕು ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳ ನೇಮಕ

ನವಲಗುಂದ: ತಾಲ್ಲೂಕಿನ ಗ್ರಾಮ ಪಂಚಾಯತಿಗಳ ಚುನಾಯಿತ ಸದಸ್ಯರ ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ, ಆಡಳಿತಾತ್ಮಕ ಸುಗಮ ನಿರ್ವಹಣೆಗಾಗಿ ಒಟ್ಟು ಒಟ್ಟು 22 ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಅವರು ಅಧಿಸೂಚನೆ ಹೊರಡಿಸಿದ್ದಾರೆ ಎಂದು ನವಲಗುಂದ ಹಾಗೂ ಅಣ್ಣಿಗೇರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪಿ.ಆ‌ರ್.ಬಡೇಖಾನವರ ತಿಳಿಸಿದ್ದಾರೆ.

ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮ ಪಂಚಾಯತಿಗೆ ತಾಂತ್ರಿಕ ಸಹಾಯಕರು,ನೀರಾವರಿ ಇಲಾಖೆ (ಉಪ ವಿಭಾಗ 4), ಜಾವೂರ ಗ್ರಾಮ ಪಂಚಾಯತಿಗೆ ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಗುಮ್ಮಗೋಳ ಗ್ರಾಮ ಪಂಚಾಯತಿಗೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಗ್ರಾ.ಕು.ನೀಮತ್ತುನೈರ್ಮಲ್ಯ), ಶಿರೂರ ಗ್ರಾಮ ಪಂಚಾಯತಿಗೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಪಂಚಾಯತರಾಜ್ ಉಪ-ವಿಭಾಗ), ಮೊರಬ ಗ್ರಾಮ ಪಂಚಾಯತಿಗೆ ಸಹಾಯಕ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ, ಶಿರಕೋಳ ಗ್ರಾಮ ಪಂಚಾಯತಿಗೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ನೀರಾವರಿ ಇಲಾಖೆ ಶಲವಡಿ, ತಿರ್ಲಾಪೂರ ಗ್ರಾಮ ಪಂಚಾಯತಿಗೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ನೀರಾವರಿ ಇಲಾಖೆ (ನಂ:17), ಬೆಳಹಾರ ಗ್ರಾಮ ಪಂಚಾಯತಿಗೆ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕ ಪಂಚಾಯತ, ನಾಯಕನೂರ ಗ್ರಾಮ ಪಂಚಾಯತಿಗೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ನೀರಾವರಿ ಇಲಾಖೆ ಅಳಗವಾಡಿ, ತಡಹಾಳ ಗ್ರಾಮ ಪಂಚಾಯತಿಗೆ ಸಹಾಯಕ ಅಭಿಯಂತರರು, ನೀರಾವರಿ ಇಲಾಖೆ ಮೊರಬ, ಗುಡಿಸಾಗರ ಗ್ರಾಮ ಪಂಚಾಯತಿಗೆ ಸಹಾಯಕ ಅಭಿಯಂತರರು, ನೀರಾವರಿ ಇಲಾಖೆ (ನಂ:16), ಹಾಳಕುಸುಗಲ್ಲ ಗ್ರಾಮ ಪಂಚಾಯತಿಗೆ ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಹೆಬ್ಬಾಳ ಗ್ರಾಮ ಪಂಚಾಯತಿಗೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು (ಬಿ.ಸಿ.ಎಮ್), ಬೆಳವಟಗಿ ಗ್ರಾಮ ಪಂಚಾಯತಿಗೆ (ಏ.20 ರಿಂದ) ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಇವರನ್ನು ನೇಮಿಸಲಾಗಿದೆ.

ಕರ್ನಾಟಕ ಪಂಚಾಯತ ರಾಜ್ 1993 ರ ಅಧಿನಿಯಮದಂತೆ, ನೇಮಕಗೊಂಡ ಆಡಳಿತಾಧಿಕಾರಿಗಳು ಗ್ರಾಮ ಪಂಚಾಯತಿಯ ಎಲ್ಲಾ ಅಧಿಕಾರಗಳನ್ನು ಚಲಾಯಿಸಬೇಕು ಮತ್ತು ಕರ್ತವ್ಯಗಳನ್ನು ನೆರವೇರಿಸಬೇಕು. 2026ರ ಅವಧಿಗಾಗಿ ಚುನಾವಣೆ ನಡೆದು ಹೊಸ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗುವವರೆಗೆ ಈ ಅಧಿಕಾರಿಗಳು ಪ್ರಭಾರದಲ್ಲಿರುತ್ತಾರೆ. ಈ ಆದೇಶವು ಹುದ್ದೆವಾರು ಇರುವುದರಿಂದ ಅಧಿಕಾರಿಗಳು ವರ್ಗವಾದರೂ, ಆ ಹುದ್ದೆಗೆ ಬರುವ ಹೊಸ ಅಧಿಕಾರಿಗಳೇ ಆಡಳಿತಾಧಿಕಾರಿಯಾಗಿ ಮುಂದುವರಿಯಲಿದ್ದಾರೆ ಎಂದು ಭುವನೇಶ ಪಾಟೀಲ ಆದೇಶಿಸಿದ್ದಾರೆ ಎಂದು ಬಡೇಖಾನವರ ತಿಳಿಸಿದರು.

Edited By : PublicNext Desk
Kshetra Samachara

Kshetra Samachara

04/02/2026 11:40 am

Cinque Terre

797

Cinque Terre

0

ಸಂಬಂಧಿತ ಸುದ್ದಿ