ಧಾರವಾಡ : ಖರೀದಿ ಕೇಂದ್ರದ ಮೂಲಕ ಜಿಲ್ಲೆಯ 95 ರೈತ ಕುಟುಂಬಗಳು ಹೆಸರು ಖರೀದಿ ನೀಡಿದ್ದು, ಆ ರೈತ ಕುಟುಂಬಗಳಿಗೆ ಇದುವರೆಗೂ ಹಣ ಜಮೆಯಾಗದೇ ಇರುವುದರಿಂದ ರೈತ ಸೇನಾ ಕರ್ನಾಟಕದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮುಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ಹೆಸರು ಕಾಳುಗಳನ್ನು ಸರ್ಕಾರ ಬೆಂಬಲ ಬೆಲೆ ಅಡಿಯಲ್ಲಿ ಖರೀದಿ ಮಾಡಿದೆ. ಬ್ಯಾಹಟ್ಟಿ, ಸುಳ್ಯ, ಕುಸುಗಲ್, ಅಮರಗೋಳದ 95 ಖಾತೆದಾರರು ಡಿ.23ರಂದು ಬ್ಯಾಹಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದವರ ಮಾರ್ಕೆಟಿಂಗ್ ಫೆಡರೇಶನ್ ಅಧಿಕಾರಿಗಳ ಮೂಲಕ ಖರೀದಿ ನೀಡಿದ್ದಾರೆ. ಆದರೆ, ಈ ಎಲ್ಲಾ ರೈತರ ಖಾತೆಗಳಿಗೆ ಸರ್ಕಾರದಿಂದ ಬರಬೇಕಾದ ಬೆಂಬಲ ಬೆಲೆ ಹಣ ಇನ್ನೂ ಜಮೆಯಾಗಿಲ್ಲ.
ಮಾರ್ಕೆಟಿಂಗ್ ಫೆಡರೇಶನ್ ಅಧಿಕಾರಿಯಾದ ಮಲ್ಲಿಕಾರ್ಜುನ ಅವರು ರೈತರ ಜೊತೆಗೆ ಅತ್ಯಂತ ಅಸಭ್ಯವಾಗಿ ನಡೆದುಕೊಳ್ಳುವ ರೀತಿ ಕೂಡ ಕಂಡು ಬಂದಿದೆ. ರೈತರು ಈ ವ್ಯಕ್ತಿಯ ಬಗ್ಗೆ ಬಹಳಷ್ಟು ನೊಂದಿದ್ದಾರೆ. ಈ ಅಧಿಕಾರಿಯು ಸುಮಾರು 15 ವರ್ಷಗಳಿಂದ ಒಂದೇ ಜಾಗದಲ್ಲಿ ನೆಲೆ ಹೂಡಿದ್ದು ಇವರು ಸರ್ಕಾರದ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಕೂಡಲೇ ಈ ಅಧಿಕಾರಿಯ ಮೇಲೆ ಶಿಸ್ತು ಕ್ರಮ ಜರುಗಿಸಿ 95 ಖಾತೆದಾರರಿಗೆ ಕೂಡಲೇ ಬೆಂಬಲ ಬೆಲೆಯ ಹಣ ಜಮೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/02/2026 01:15 pm
LOADING...