RED & WHITE ಸೆವೆನ್ ರಾಜ್ ನಿರ್ಮಾಣ ಹಾಗೂ ಅಫ್ಜಲ್ ನಿರ್ದೇಶನದ ‘ನೆನಪುಗಳ ಮಾತು ಮಧುರ’ ಚಿತ್ರವು ಈ ವಾರ ಫೆಬ್ರವರಿ 6ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಈ ಚಿತ್ರದಲ್ಲಿ ನಾಲ್ಕು ಸ್ನೇಹಿತರ ಜೀವನದ ಮೇಲೆ ಆಧಾರಿತ ನಾಲ್ಕು ವಿಭಿನ್ನ ಕಥೆಗಳು ಇದ್ದು, ಇದು ಆಂಥಾಲಜಿ ಮಾದರಿಯ ಚಿತ್ರವಾಗಿದೆ. ಚಿತ್ರದಲ್ಲಿ ಮರ್ಡರ್ ಮಿಸ್ಟ್ರಿ, ಹಾರರ್, ಹಾಸ್ಯ ಹಾಗೂ ಇಂದಿನ ಯುವಜನರ ಬದುಕಿನಲ್ಲಿ ನಡೆಯುವ ಕೆಲವು ವಿಶೇಷ ಘಟನೆಗಳನ್ನು ತೋರಿಸಲಾಗಿದೆ ಎಂದು ನಿರ್ದೇಶಕ ಅಫ್ಜಲ್ ತಿಳಿಸಿದ್ದಾರೆ.
ಅಫ್ಜಲ್ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವ ಜೊತೆಗೆ ನಿರ್ದೇಶನವೂ ಮಾಡಿದ್ದಾರೆ. ಚಿತ್ರದ ಛಾಯಾಗ್ರಹಣವನ್ನು ಸ್ವಾಮಿ ಮೈಸೂರು, ಸಂಗೀತವನ್ನು ರಾಜು ಎಮ್ಮಿಗನೂರು, ಸಂಕಲನವನ್ನು ಕಾರ್ತಿಕ್ ಈಶ್ವರಾಚಾರಿ ಮಾಡಿದ್ದಾರೆ. ದೇವರಾಜ ಕುಷ್ಟಗಿ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ಮತ್ತಷ್ಟು ಬಲ ನೀಡಿದೆ.
ನಿರ್ದೇಶಕ ಅಫ್ಜಲ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮತ್ತೊಂದು ಮುಖ್ಯ ಪಾತ್ರದಲ್ಲಿ ನಿರ್ಮಾಪಕ ಸೆವೆನ್ ರಾಜ್ ನಟಿಸಿದ್ದಾರೆ. ಚಿತ್ರದ ತಾರಾಬಳಗದಲ್ಲಿ ವಸಿಷ್ಠ ಬಂಟನೂರು, ರಣವೀರ್, ರಾಜಪ್ರಭು, ವಿನಯ್, ಅಂಜಲಿ, ಸೌಮ್ಯ, ರೇಖಾ ರಮೇಶ್, ಶುಭ ತೀರ್ಥ, ವಾದ್ಯಾ, ಗುಬ್ಬಚ್ಚಿ, ಅರವಿಂದ್, ನಾಗೇಂದ್ರ ಅರಸ್ ಸೇರಿದಂತೆ ಅನೇಕರು ಅಭಿನಯಿಸಿದ್ದಾರೆ.
PublicNext
04/02/2026 05:20 pm
LOADING...