ಖ್ಯಾತ ನಟ ಮನೋಜ್ ಬಾಜಪೇಯಿ ನಟನೆಯ ಹೊಸ ಸಿನಿಮಾ ಇದೀಗ ವಿವಾದಕ್ಕೆ ಕಾರಣವಾಗಿದೆ. ಸಿನಿಮಾದ ಟ್ರೈಲರ್ ಫೆಬ್ರವರಿ 3ರಂದು ಬಿಡುಗಡೆಯಾಗಿದ್ದು, ಸಿನಿಮಾಕ್ಕೆ ಇಟ್ಟಿರುವ ಹೆಸರಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸಿನಿಮಾದ ಹೆಸರು ಸಮುದಾಯವೊಂದನ್ನು ಅವಮಾನಿಸುವಂತಿದೆ ಎಂದು ಹಲವರು ಆರೋಪಿಸಿದ್ದಾರೆ.
ಮನೋಜ್ ಬಾಜಪೇಯಿ ನಾಯಕನಾಗಿ ನಟಿಸಿರುವ ‘ಗುಸ್ ಕೋರ್ ಪಂಡತ್’ ಚಿತ್ರದ ಶೀರ್ಷಿಕೆಯೇ ಈಗ ಚರ್ಚೆಯ ವಿಷಯವಾಗಿದೆ. ‘ಪಂಡತ್’ ಎಂಬ ಪದ ಪಂಡಿತರನ್ನು ಕೆಳಗೆ ತೋರಿಸುವಂತಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿನಿಮಾ ಹೆಸರನ್ನು ಬದಲಾಯಿಸದಿದ್ದರೆ ಬಹಿಷ್ಕಾರ ಮಾಡುವುದಾಗಿ ನೆಟ್ಟಿಗರು ಎಚ್ಚರಿಕೆ ನೀಡಿದ್ದಾರೆ.
ಟ್ರೈಲರ್‌ನಲ್ಲಿ ಮನೋಜ್ ಬಾಜಪೇಯಿ ಭ್ರಷ್ಟ ಮತ್ತು ಕ್ರೂರ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಪಾತ್ರದ ಬದಲು ಸಿನಿಮಾದ ಹೆಸರೇ ಹೆಚ್ಚಿನ ವಿವಾದ ಹುಟ್ಟುಹಾಕಿದೆ. ಮೂಲದಲ್ಲಿ ಸಿನಿಮಾಕ್ಕೆ ‘ಗುಸ್ಕೋರ್ ಪಂಡಿತ್’ ಎಂದು ಹೆಸರಿಡಲಾಗಿತ್ತು ಎನ್ನಲಾಗಿದ್ದು, ನಂತರ ಸೆನ್ಸಾರ್ ಕಾರಣದಿಂದ ‘ಪಂಡತ್’ ಎಂದು ಬದಲಾಯಿಸಲಾಗಿದೆ.
ಸಿನಿಮಾದಲ್ಲಿ ಮನೋಜ್ ಜೊತೆಗೆ ನಟಿ ನುಸ್ರತ್ ಬರೂಚಾ ಅಭಿನಯಿಸಿದ್ದಾರೆ. ಚಿತ್ರಕ್ಕೆ ರಿತೇಶ್ ಶಾ ನಿರ್ದೇಶನ ಮಾಡಿದ್ದು, ನೀರಜ್ ಪಾಂಡೆ ನಿರ್ಮಿಸಿದ್ದಾರೆ. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ನೇರವಾಗಿ ಬಿಡುಗಡೆ ಆಗಲಿದೆ.
PublicNext
04/02/2026 06:52 pm