ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂಧಶ್ರದ್ಧೆ ಅಪಾಯಕಾರಿ : ಭಕ್ತಿಯ ಹೆಸರಿನಲ್ಲಿ ಜೀವಕ್ಕೆ ಕುತ್ತು..: ಬುದ್ಧಿ ಬಳಸಿ, ಪ್ರಾಣ ಉಳಿಸಿ!

ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ಜನರು ತಮ್ಮ ಪ್ರಾಣವನ್ನೇ ಪಣಕ್ಕಿಡುವಂತಹ ಆಘಾತಕಾರಿ ಘಟನೆಗಳು ಮತ್ತು ವಿಡಿಯೋಗಳು ಹೆಚ್ಚಾಗುತ್ತಿವೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಶುರುವಾಗಿದ್ದು, "ಇದು ನಿಜವಾದ ಧರ್ಮವೇ?" ಎಂಬ ಗಂಭೀರ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.

ಹೌದು ಧರ್ಮದ ಮೇಲಿನ ಅತಿಯಾದ ಶ್ರದ್ಧೆ ಕೆಲವೊಮ್ಮೆ ಅಂಧಶ್ರದ್ಧೆಯಾಗಿ ಮಾರ್ಪಟ್ಟು ಅಪಾಯವನ್ನು ಆಹ್ವಾನಿಸುತ್ತದೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅಥವಾ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ನಡೆಸುವ ಸಾಹಸಗಳು ಭಕ್ತಿಯಲ್ಲ, ಬದಲಿಗೆ ಮೂರ್ಖತನ ಎಂದು ತಜ್ಞರು ಎಚ್ಚರಿಸಿದ್ದಾರೆ.

ಸದ್ಯ ವೈರಲ್‌ ಆದ ವಿಡಿಯೋದಲ್ಲಿ ಮೌಲ್ವಿಯೊಬ್ಬರು ಒಬ್ಬ ವ್ಯಕ್ತಿಯೋರ್ವನ ತೆಲೆಗೆ ದೇವರ ಹೆಸರಿನಲ್ಲಿ ನೆತ್ತಿಯ ಹಿಂದೆ ಬಲವಾಗಿ ಚುಚ್ಚುತ್ತಿರುವುದನ್ನು ನೋಡಿದ್ರೆ ಮೈ ಜುಂ ಅನಿಸುತ್ತದೆ. ಧರ್ಮದ ಹೆಸರಿನಲ್ಲಿ ಯಾರೋ ಹೇಳಿದ್ದನ್ನು ನಂಬಿ ನಿಮ್ಮ ಮಿದುಳು ಮತ್ತು ಜೀವವನ್ನು ಅಪಾಯಕ್ಕೆ ಸಿಲುಕಿಸಬೇಡಿ. ದೈಹಿಕ ಶಕ್ತಿಗಿಂತ ಬೌದ್ಧಿಕ ವಿವೇಚನೆ ಮತ್ತು ಪ್ರಜ್ಞೆ ಹೆಚ್ಚು ಮುಖ್ಯ ಎಂಬ ಸಂದೇಶವನ್ನು ಈ ಘಟನೆಗಳು ಸಾರುತ್ತಿವೆ.

Edited By : Nirmala Aralikatti
PublicNext

PublicNext

04/02/2026 06:51 pm

Cinque Terre

2.99 K

Cinque Terre

0

ಸಂಬಂಧಿತ ಸುದ್ದಿ