ಕಡೂರು : ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಲಿ ಇದ್ದ ಪ್ರಮುಖ ವೈದ್ಯಕೀಯ ಹುದ್ದೆಗಳಿಗೆ ಹೊಸದಾಗಿ ವೈದ್ಯರನ್ನು ನೇಮಕ ಮಾಡಲಾಗಿದ್ದು, ಅವರು ಈಗಾಗಲೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಚಂದಾ ತಿಳಿಸಿದ್ದಾರೆ. ಚರ್ಮರೋಗ ತಜ್ಞರಾಗಿ ಡಾ. ರಾಕೇಶ್ ಡಿ.ಎಸ್. ಹಾಗೂ ಅರಿವಳಿಕೆ ತಜ್ಞರಾಗಿ ಡಾ. ಬಿಂದು ಬಿ.ಪಿ. ಅವರು ನೇಮಕಗೊಂಡಿದ್ದಾರೆ.
ಇವರೊಂದಿಗೆ ರಜೆಯಲ್ಲಿದ್ದ ಫಿಸಿಷಿಯನ್ ಕೂಡ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಮೂಳೆ ತಜ್ಞರು ಕೂಡ ಸೇವೆಗೆ ಲಭ್ಯವಾಗಲಿದ್ದಾರೆ ಎಂದು ಮಾಹಿತಿ ನೀಡಲಾಗಿದೆ. ಆಸ್ಪತ್ರೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿರುವ ಅವರು, ಕೆಟ್ಟು ಹೋಗಿದ್ದ ಎಕ್ಸ್-ರೇ ಯಂತ್ರವನ್ನು ಈಗ ದುರಸ್ತಿಗೊಳಿಸಲಾಗಿದೆ ಮತ್ತು ಇಸಿಜಿ ಸೇವೆ ಕೂಡ ಲಭ್ಯವಿದೆ ಎಂದು ತಿಳಿಸಿದ್ದಾರೆ. ರೇಡಿಯಾಲಜಿಸ್ಟ್ ಹುದ್ದೆಯು ಶೀಘ್ರದಲ್ಲೇ ಭರ್ತಿಯಾಗಲಿದ್ದು, ಗ್ರೂಪ್-ಡಿ ನೌಕರರ ಕೊರತೆಯನ್ನು ಎನ್‌ಆರ್‌ಹೆಚ್‌ಎಂ ಶುಶ್ರೂಷಕರಿಂದ ಸದ್ಯಕ್ಕೆ ನಿರ್ವಹಿಸಲಾಗುತ್ತಿದೆ.
PublicNext
04/02/2026 08:37 pm
LOADING...