ಶಿಡ್ಲಘಟ್ಟ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 17 ನೇಬಜೆಟ್ ಮಂಡಿಸುತ್ತಿದ್ದಾರೆ ಅವರು ಕಳೆದ ಬಾರಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ್ದಾಗ ಹಲವು ಬೇಡಿಕೆಗಳನ್ನ ಶಾಸಕ ಬಿ ಎನ್ ರವಿ ಕುಮಾರ್ ಅವರು ಮಂಡಿಸಿದ್ದರು. ಅದರಂತೆ ಇಂದು ನಡೆಯುತ್ತಿರುವ ಬಜೆಟ್ ನಲ್ಲಿ ಸಿದ್ದರಾಮಯ್ಯ ಅವರು ಶಾಸಕ ಬಿ ಎನ್ ರವಿ ಕುಮಾರ್ ಅವರಿಗೆ ನೀಡಿದ ಆಶ್ವಾಸನೆಗಳನ್ನು ಈ ಬಜೆಟ್ ನಲ್ಲಿ ಮಂಡಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಶಾಸಕ ಬಿಎನ್ ರವಿಕುಮಾರ್ ಹಾಗೂ ಕ್ಷೇತ್ರದ ಜನತೆ.
ನವೆಂಬರ್ 24 2025 ರಂದು ಶಿಡ್ಲಘಟ್ಟ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದಂತಹ ಸರ್ಕಾರಿ ಕಾರ್ಯಕ್ರಮದಲ್ಲಿ ಸಿಎಂ ಅವರಿಗೆ ನಾವು ಈ ಕ್ಷೇತ್ರದ ಸಮಸ್ಯೆಗಳನ್ನ ತಿಳಿಸಿದ್ದೆ, ಕ್ಷೇತ್ರದ ಮಿನಿವಿಧಾನಸೌಧ, ನೆಹರು ಕ್ರೀಡಾಂಗಣ, ನಗರದಲ್ಲಿ ಕೇಂದ್ರ ಗ್ರಂಥಾಲಯ ಅಭಿವೃದ್ಧಿ ಸೇರಿದಂತೆ ಈ ಕ್ಷೇತ್ರದಲ್ಲಿ ಇರುವಂತಹ ಸುಮಾರು ಸಮಸ್ಯೆಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೆ ಅವುಗಳಿಗಾಗಿ ಇಂದು ಬಜೆಟ್ ನಲ್ಲಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಕ್ಕೆ ವಿಶೇಷ ಅನುದಾನ ಕೊಡುತ್ತಾರೆ ಎಂಬ ನಿರೀಕ್ಷೆ ಇದೆ ಎಂದು ಶಾಸಕ ಬಿ ಎಂ ರವಿಕುಮಾರ್ ಅವರು ತಿಳಿಸಿದರು.
ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಚಿಕ್ಕಬಳ್ಳಾಪುರ
Kshetra Samachara
06/03/2026 08:22 am