ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯ ಬಜೆಟ್ ಸರ್ವಾಂಗೀಣ ಅಭಿವೃದ್ಧಿ ಯೋಜನೆಗಳಿಂದ ಕೂಡಿದೆ - ಎ. ಎಸ್. ಪೊನ್ನಣ್ಣ

ಮಡಿಕೇರಿ: ಸಿ.ಎಂ. ಸಿದ್ದರಾಮಯ್ಯ ಮಂಡಿಸಿದ 2026-27 ನೇ ಸಾಲಿನ ರಾಜ್ಯ ಬಜೆಟ್ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಜನಪ್ರಿಯ ಯೋಜನೆಗಳಿಂದ ಕೂಡಿದ್ದು ಆರೋಗ್ಯ, ಶಿಕ್ಷಣ, ಅರಣ್ಯ, ನೀರಾವರಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಹಿಳೆಯರು ಹಾಗೂ ಯುವಕರಿಗೆ ಈ ಬಜೆಟ್ ನೆರವಾಗಲಿದ್ದು ಹಲವು ಪ್ರಮುಖ ಯೋಜನೆಗಳ ಘೋಷಣೆಯಾಗಿದೆ ಎಂದು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅಭಿಪ್ರಾಯ ಪಟ್ಟಿದ್ದಾರೆ.

ಕೊಡಗು ಜಿಲ್ಲೆಗೆ ಹಿಂದಿನ ಬಾರಿಯು ಮುಖ್ಯ ಮಂತ್ರಿಗಳ ನಿಧಿಯಿಂದ ಹಲವಾರು ಯೋಜನೆಗೆ ಅನುದಾನ ಒದಗಿಸಲಾಗಿತ್ತು, ಈ ಬಾರಿ ಪ್ರಮುಖವಾಗಿ ಕೊಡವ ಅಭಿವೃದ್ಧಿ ನಿಧಿ ಸ್ಥಾಪನೆ ಸೇರಿದಂತೆ ನೀರಾವರಿ ಇಲಾಖೆಯ ವತಿಯಿಂದ ಕೆರೆಗಳ ಅಭಿವೃದ್ಧಿ, ನಾಲೆ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗಳಿಗೆ ಅನುದಾನ, ವಿರಾಜಪೇಟೆಯಲ್ಲಿ ಕ್ರೀಡಾ ವಸತಿ ಶಾಲೆ ಹೀಗೆ ಹಲವು ಯೋಜನೆಗಳಿಗೆ ಬಜೆಟ್ ನಲ್ಲಿ ಅನುದಾನ ನೀಡಲಾಗಿದ್ದು ಇದನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ.

Edited By : PublicNext Desk
Kshetra Samachara

Kshetra Samachara

07/03/2026 07:18 am

Cinque Terre

100

Cinque Terre

0

ಸಂಬಂಧಿತ ಸುದ್ದಿ