ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಮ್ಮಾಡು ಕಾಲೋನಿಗೆ ಪೊನ್ನಣ್ಣ ಭೇಟಿ: ಸಮಸ್ಯೆ ಆಲಿಸಿದ ಶಾಸಕರು

ಪೊನ್ನಂಪೇಟೆ: ಕೊಡಗು ಜಿಲ್ಲೆ ಪೊನ್ನಂಪೇಟೆ ಪ್ರವಾಸದಲ್ಲಿರುವ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ, ಬಲ್ಯಮಂಡೂರು ಗ್ರಾಮದ ಕೊಮ್ಮಾಡು ಕಾಲೋನಿಗೆ ಭೇಟಿ ನೀಡಿ ಸ್ಥಳೀಯ ಕಾಲೋನಿ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು.

ಕಾಲೋನಿ ನಿವಾಸಿಗಳಿಗೆ ಸರಕಾರ ಒದಗಿಸಿರುವ ಸವಲತ್ತುಗಳ ಬಗ್ಗೆ ಮಾಹಿತಿ ಪಡೆದರು. ಕಾಲೋನಿ ನಿವಾಸಿಗಳು ಶಾಸಕರಲ್ಲಿ ತಮ್ಮ ಹಲವು ಬೇಡಿಕೆಗಳನ್ನು ಇದೇ ಸಂದರ್ಭದಲ್ಲಿ ಹೇಳಿಕೊಂಡಿದ್ದು, ಎಲ್ಲವನ್ನು ಆಲಿಸಿದ ಶಾಸಕರು ಅಗತ್ಯಕ್ಕೆ ಅನುಸಾರವಾಗಿ ಅನುದಾನವನ್ನು ಒದಗಿಸಿ ಕಾಲೋನಿ ನಿವಾಸಿಗಳ ಏಳಿಗೆಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

Edited By : PublicNext Desk
Kshetra Samachara

Kshetra Samachara

08/03/2026 07:25 am

Cinque Terre

300

Cinque Terre

0

ಸಂಬಂಧಿತ ಸುದ್ದಿ