ಕುಶಾಲನಗರ : ಮುಸಲ್ಮಾನರ ಪವಿತ್ರ ಧರ್ಮಗಳಲ್ಲಿ ಒಂದಾದ ಈದುಲ್ ಫಿತರ್ ಹಬ್ಬವನ್ನು ಕುಶಾಲನಗರದ ಹಿಲಾಲ್ ಮಸೀದಿಯಲ್ಲಿ ಆಚರಿಸಲಾಯಿತು.ನಿರಂತರ 29 ದಿನಗಳ ವ್ರತಾಚರಣೆಯ ನಂತರ ಶಾಫಿ ಬಾಂಧವರು ಈದುಲ್ ಫಿತರ್ ಹಬ್ಬವನ್ನು ಆಚರಿಸಿದರು.
ಹಬ್ಬದ ದಿನದಂದು ಬೆಳಿಗ್ಗೆ ವಿಶೇಷವಾದ ಪ್ರಾರ್ಥನೆ ನೆರವೇರಿಸಲಾಯಿತು.ಶಾಂತಿ, ಸೌಹಾರ್ದತೆ, ಕರುಣೆ, ಸಹನೆ ಬಗ್ಗೆ ಧರ್ಮಗುರುಗಳಾದ ಶಾಫಿ ಫೈಜ಼ಿ ಇರ್ಪಾನಿಯವರು ಪ್ರಭಾಷಣ ನೀಡಿದರು. ಜೊತೆಗೆ ಈದುಲ್ ಫಿತರ್ ನ ಪ್ರಾಮುಖ್ಯತೆ ಬಗ್ಗೆ, ಪ್ರತಿಯೊಬ್ಬರೂ ಕಡ್ಡಾಯವಾಗಿ ನೀಡಬೇಕಾದ ದಾನದ ಬಗ್ಗೆ ಅವರು ಬೋಧನೆ ನೀಡಿದರು.
ನಮಾಜ಼್ ನ ನಂತರ ಪರಸ್ಪರ ಈದ್ ನ ಶುಭಾಶಯ ಹಂಚಿಕೊಂಡರು.ಈ ಸಂದರ್ಭ ಮಾತನಾಡಿದ ಹಿಲಾಲ್ ಮಸೀದಿ ಅಧ್ಯಕ್ಷರಾದ ರಫೀಕ್ ಹಾಗೂ ಕಾರ್ಯದರ್ಶಿ ಕರೀಂ, ಹಸಿದವನ ನೋವನ್ನು ಅರಿಯುವ ಉದ್ದೇಶದಿಂದ ನಾವು ಮೂವತ್ತು ದಿನಗಳ ಕಾಲ ವ್ರತಾಚರಣೆ ಮಾಡುತ್ತೇವೆ. ಎಲ್ಲರಿಗೂ ಈದುಲ್ ಫಿತರ್ ಹಬ್ಬದ ಶುಭಾಶಯಗಳು ಎಂದರು.
PublicNext
21/03/2026 03:16 pm
LOADING...