ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು : ಕಾರು-ಬೈಕ್ ಡಿಕ್ಕಿ, ಇಬ್ಬರು ಯುವಕರ ದಾರುಣ ಸಾವು

ಕೊಡಗು : ಜಿಲ್ಲೆಯ ಗೋಣಿಕೊಪ್ಪ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗೋಣಿಕೊಪ್ಪ-ತಿತಿಮತಿ-ಮೈಸೂರು ರಸ್ತೆಯ ದೇವರಪುರ ಬಳಿ ಮಧ್ಯಾಹ್ನದ ವೇಳೆಗೆ ಕಾರು ಮತ್ತು ಎರಡು ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಈ ದುರ್ಘಟನೆ ನಡೆದಿದೆ. ಮೃತಪಟ್ಟವರನ್ನು ನಂಜನಗೂಡು ನಿವಾಸಿ ಶಿವಕುಮಾರ್ (25) ಮತ್ತು ಕೇರಳದ ಪಾಲಕ್ಕಾಡ್ ನಿವಾಸಿ ಮೊಹಮದ್ ಶಿಹಾಬ್ (27) ಎಂದು ಗುರುತಿಸಲಾಗಿದೆ.

ಮೈಸೂರು-ತಿತಿಮತಿ ಮಾರ್ಗವಾಗಿ ಗೋಣಿಕೊಪ್ಪ ಕಡೆಗೆ ಬರುತ್ತಿದ್ದ ಕಾರು, ಎದುರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಶಿವಕುಮಾರ್ ಮತ್ತು ಮೊಹಮದ್ ಶಿಹಾಬ್ ಚಲಾಯಿಸುತ್ತಿದ್ದ ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಎರಡೂ ಬೈಕ್‌ಗಳಲ್ಲಿದ್ದ ಸವಾರರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Edited By :
PublicNext

PublicNext

21/03/2026 08:37 pm

Cinque Terre

4.58 K

Cinque Terre

0

ಸಂಬಂಧಿತ ಸುದ್ದಿ