ರಾಯಚೂರು : ಕಳೆದ ಮೂರು ತಿಂಗಳಿನಿಂದ ಸರಿಯಾಗಿ ವೇತನ ಕೊಟ್ಟಿಲ್ಲ, ಹಾಗೂ ಕೆಲವರಿಗೆ ಈ ಹಿಂದೆ ಕೊಟ್ಟ ವೇತನದಲ್ಲಿ 6 ಸಾವಿರ ರೂಪಾಯಿಗಳನ್ನು ಕಟ್ ಮಾಡಿದ್ದಾರೆ, ಇನ್ನು ಕೆಲವರಿಗೆ ಪಿಎಫ್ ಹಣ ಹಾಕಿಲ್ಲ ಎಂದು ರಾಯಚೂರು ನಗರದ ರಿಮ್ಸ್ ಆಸ್ಪತ್ರೆಯ ಸಫಾಯಿ ಕರ್ಮಾಚಾರಿಗಳು, ಹಾಗೂ ಡಿ ಗ್ರೂಪ್ ನೌಕರರು ಕೆಲಸ ತ್ಯಜಿಸಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಸ್ವಿಸ್ ಕಂಪನಿ ಅಡಿಯಲ್ಲಿ ರಿಮ್ಸ್ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಕೆಲಸ ಮಾಡಿಸಿಕೊಂಡು ಸರಿಯಾಗಿ ಸ್ವಿಸ್ ಕಂಪನಿ ವೇತನ ನೀಡುತ್ತಿಲ್ಲ. ಈ ಹಿಂದೆ ವೇತನ ನೀಡಿದರೂ ಸುಖಾ ಸುಮ್ಮನೆ 6 ಸಾವಿರ ರೂಪಾಯಿಗಳನ್ನು ಕಟ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಪಿಎಫ್ ಹಣವನ್ನೂ ಹಾಕಿಲ್ಲ ನಮಗೆ ನ್ಯಾಯ ಬೇಕು ಎಂದು ಪ್ರತಿಭಟನೆ ನಡೆಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಿಮ್ಸ್ ಆಸ್ಪತ್ರೆಯ ಸೂಪರಿಂಡೆಂಟ್ ಸಫಾಯಿ ಕರ್ಮಾಚಾರಿಗಳನ್ನು ಕರೆದು ಅವರ ಸಮಸ್ಯೆಗಳನ್ನು ಆಲಿಸಿ ಸೂಕ್ತ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು.
PublicNext
07/03/2026 07:22 am
LOADING...