ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು: ಬಣ್ಣದಾಟದ ಬಳಿಕ ಸ್ನಾನಕ್ಕೆ ತೆರಳಿದ್ದ ಯುವಕ ಕಾಲುವೆಯಲ್ಲಿ ಮುಳುಗಿ ಸಾವು

ರಾಯಚೂರು: ಯುಗಾದಿ ಹಿನ್ನೆಲೆ ಬಣ್ಣ ಆಡಿದ ನಂತರ ಸ್ನಾನಕ್ಕೆ ತೆರಳಿದ ಯುವಕ ನೀರುಪಾಲಾದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ನಾರಾಯಣಪುರ ಬಲದಂಡೆ ಕಾಲುವೆಯಲ್ಲಿ ಸ್ನಾನಕ್ಕೆ ತೆರಳಿದ ಯುವಕ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ರಾಯಚೂರು ಜಿಲ್ಲೆಯ ಅರಕೇರಾ ತಾಲೂಕಿನ ನಾಗೋಲಿ ಗ್ರಾಮದ ಬಳಿ ಘಟನೆ ನಡೆದಿದ್ದು, ಬುದ್ಧಿನ್ನಿ ಗ್ರಾಮದ ನಿವಾಸಿ ಗಂಗಾಧರ(20) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ರಾಯಚೂರು ಜಿಲ್ಲೆಯಲ್ಲಿ ಯುಗಾದಿ ಹಬ್ಬದ ಮಾರನೆ ದಿನ ಬಣ್ಣ ಆಡುವುದು ಪ್ರತೀತಿ.. ಬಣ್ಣ ಆಡಿದ ನಂತರ ಸ್ನೇಹಿತರೊಂದಿಗೆ ಸ್ನಾನ ಮಾಡಲು ನಾರಾಯಣಪುರ ಬಲದಂಡೆ ಕಾಲುವೆಗೆ ತೆರಳಿದ್ದ ಎನ್ನಲಾಗಿದೆ. ಈ ವೇಳೆ ಕಾಲು ಜಾರಿ ಬಿದ್ದು ನೀರು ಪಾಲಾಗಿದ್ದ

ಮಾಹಿತಿ ತಿಳಿದು ಗ್ರಾಮಸ್ಥರು ಶೋಧ ಕಾರ್ಯ ನಡೆಸಿದ್ದರು. ಇಂದು ಸಂಜೆ 4 ಗಂಟೆಗೆ ನಾಗೋಲಿ ಗ್ರಾಮದ ಬಳಿ ಕಾಲುವೆಯಲ್ಲಿ ಮೃತದೇಹ ಪತ್ತೆಯಾಗಿದೆ.. ಈ ಕುರಿತು ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vinayak Patil
PublicNext

PublicNext

21/03/2026 11:08 pm

Cinque Terre

3.25 K

Cinque Terre

0