ವಿಜಯಪುರ : ಇಂತಹ ರಸ್ತೆಯನ್ನ ನೀವು ರಾಜ್ಯದಲ್ಲಿ ಎಲ್ಲೂ ನೋಡಿರಲ್ಲ ಅನಿಸುತ್ತೇ. ಇದು ರಾಷ್ಟ್ರೀಯ ಹೆದ್ದಾರಿಯೋ ಕಚ್ಚಾ ರಸ್ತೆಯೋ ಅಂತಾ ನಿಮಗೆ ಕನ್ಫ್ಯೂಸ್ ಆಗುತ್ತೆ.
ವಿಜಯಪುರದ ರಾಷ್ಟ್ರೀಯ ಹೆದ್ದಾರಿ 548 ಬಿ ನಲ್ಲಿ ನೀವು ಸಂಚಾರ ಮಾಡಬೇಕಾದ್ರೆ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕು. ವಿಜಯಪುರದಿಂದ ಇಂಡಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನ ನೋಡಿದ್ರೆ ಎಂತಹ ರಸ್ತೆ ಇದಪ್ಪಾ ಎಂದು ಜನ ಕೇಳೋ ಹಂಗಾಗಿದೆ.
ವಿಜಯಪುರದಿಂದ ಇಂಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 548 ಬಿ ರಸ್ತೆಯ ದುಸ್ಥಿತಿಯಿಂದಾಗಿ ಜನರು ಹೈರಾಣಾಗಿದ್ದಾರೆ ಈ ಭಾಗದಲ್ಲಿ 20 ಕಿಲೋ ಮೀಟರ್ ಸಂಚಾರ ಮಾಡಬೇಕಾದ್ರೆ ಎರಡು ಗಂಟೆ ಬೇಕಾಗಿದೆ.
ವಿಜಯಪುರದಿಂದ ನಾಗಠಾಣದವರೆಗೆ ಸಂಚಾರ ಮಾಡೋಕೆ ವಾಹನ ಸವಾರರು ಹರಸಾಹಸ ಮಾಡುವಂತಾಗಿದೆ.ಈ ಮೊದಲು ರಾಜ್ಯ ಹೆದ್ದಾರಿ ಇದ್ದಾಗಲೂ ಇದೇ ಪರಿಸ್ಥಿತಿ ಇತ್ತು. ಇದೀಗ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಿದರು ಇನ್ನು ಕಾಮಗಾರಿ ಮುಗಿದಿಲ್ಲ. ಒಂದು ವರ್ಷದಿಂದ ಕಾಮಗಾರಿ ನಡೆಯುತ್ತಿದ್ದು, ಜನ ಸಂಕಷ್ಟ ಪಡುವಂತಾಗಿದೆ.
ಕಳೆದ ಒಂದು ವರ್ಷದ ಹಿಂದೆ ರಾಷ್ಟ್ರೀಯ ಹೆದ್ದಾರಿ ಮಾಡಿದ ಮೇಲೂ ಏನು ಪ್ರಯೋಜನವಿಲ್ಲ. ಜನರು ಇಂಡಿ ವಿಜಯಪುರ ರಸ್ತೆ ಸಂಚಾರ ಬೇಡವೇ ಬೇಡ ಎನ್ನುತ್ತಿದ್ದಾರೆ. ಅಲ್ಲದೆ ಈ ರಸ್ತೆಯಲ್ಲಿ ಸಂಚಾರ ಮಾಡೋಕು ಆಗದೆ ವಾಹನ ಸವಾರರು ಪರದಾಡುವಂತಾಗಿದೆ.
ಇನ್ನೂ ಗರ್ಭಿಣಿಯರಿಗೆ, ರೋಗಿಗಳಿಗೆ ಈ ರಸ್ತೆಯಲ್ಲಿ ಸಂಚಾರ ಮಾಡುವಂತಿಲ್ಲ ಎನ್ನುವಂತಾಗಿದ್ದು, ಒಂದು ಕಡೆ ಹಾಳಾದ ರಸ್ತೆ. ಮತ್ತೊಂದು ಧೂಳಿನಿಂದ ವಾಹನ ಸವಾರರ ಪರದಾಡುವಂತಾಗಿದೆ. ಇಲ್ಲಿ ಸಂಚಾರ ಮಾಡುವಾಗ ಮಾಸ್ಕ್ ಕಡ್ಡಾಯ ಹಾಕಬೇಕು ಎನ್ನುವಂತಾಗಿದೆ. ನಾಗಠಾಣ, ಅಲಿಯಾಬಾದ್, ಅಥರ್ಗ ಸೇರಿದಂತೆ ಹಲವು ಊರಿಗೆ ತೆರಳಲು ಸಂಕಷ್ಟ ಎದುರಾಗಿದೆ...
ರಸ್ತೆ ಹಾಳಾಗಿರುವ ಕಾರಣ ಸೋಲಾಪುರ ಹೆದ್ದಾರಿ ಅಥವಾ ಕವಲಗಿ ಮಾರ್ಗವಾಗಿ ಜನರು ವಿಜಯಪುರಕ್ಕೆ ಸಂಚಾರ ಮಾಡಬೇಕಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಜನರ ಪರದಾಟ ತಪ್ಪಿಸಬೇಕು ಎಂಬುದು ನಮ್ಮ ಒತ್ತಾಯ...
ಪಬ್ಲಿಕ್ ನೆಕ್ಸ್ಟ್ ವಿಜಯಪುರ
PublicNext
07/03/2026 01:25 pm