ವಿಜಯಪುರ: ಮಧ್ಯಪ್ರಾಚ್ಯದಲ್ಲಿ ನಡೆದಿರುವ ಯುದ್ಧದ ಬಿಸಿ ವಿಜಯಪುರ ಜಿಲ್ಲೆಗೂ ತಟ್ಟಿದೆ. ಗ್ಯಾಸ್ ಕೊರತೆಯ ಭೀತಿ ಜನರನ್ನು ಆವರಿಸಿದ್ದು, ಈ ಹಿನ್ನೆಲೆಯಲ್ಲಿ ಗ್ರಾಹಕರು ಗ್ಯಾಸ್‌ಗಾಗಿ ಮುಗಿಬಿದ್ದಿದ್ದರೆ, ಎಲ್‌ಪಿಜಿಗಾಗಿ ಆಟೋ ಚಾಲಕರು ಪರದಾಡುತ್ತಿದ್ದಾರೆ.
ನಗರದ ಸ್ಟೇಷನ್ ರಸ್ತೆಯಲ್ಲಿರುವ ಭಾರತ ಗ್ಯಾಸ್ ಮುಂಭಾಗ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಗೃಹ ಬಳಕೆ ಸಿಲಿಂಡರ್‌ಗಾಗಿ ಕ್ಯೂ ನಿಂತಿದ್ದಾರೆ. ಗ್ಯಾಸ್ ಪೂರೈಕೆ ಸ್ಥಗಿತವಾಗುವ ಆತಂಕದಲ್ಲಿ ಜನರು
ಬುಕ್ ಮಾಡಿದ ಗ್ಯಾಸ್ ಮನೆಗೆ ಬರುವವರೆಗೂ ಕಾಯದೇ ಅಂಗಡಿಗೆ ಆಗಮಿಸಿ ಗ್ಯಾಸ್ ಖರೀದಿಸಲು ಸರತಿ ಸಾಲಿನಲ್ಲಿ ನಿಂತಿದ್ದಾರೆ.
ಇದಕ್ಕೆ ಅಂಗಡಿಯವರು ಆತಂಕ ಪಡಬೇಡಿ ಗೃಹಬಳಕೆ ಸಿಲಿಂಡರ್‌ಗೆ ಯಾವುದೇ ಸಮಸ್ಯೆ ಇಲ್ಲ, ಆದರೆ ಕಮರ್ಷಿಯಲ್ ಗ್ಯಾಸ್ ಒಂದಿಷ್ಟು ಸಮಸ್ಯೆ ಉಂಟಾಗಬಹುದು ಎಂದು ಹೇಳುತ್ತಿದ್ದಾರೆ.
ಇನ್ನು ಅತ್ತ ಎಲ್‌ಪಿಜಿಗಾಗಿ ಆಟೋಗಳು ಕಿಲೋ ಮೀಟರ್ ಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದ್ದು, ಚಾಲಕರು ಹೈರಾಣಾಗಿದ್ದಾರೆ. ಸಮಸ್ಯೆ ಹೀಗೆ ಮುಂದುವರೆದ್ರೆ ನಮ್ಮ ಕುಟುಂಬ ನಿರ್ವಹಣೆ ಹೇಗೆ ಎಂದು ಆಟೋ ಚಾಲಕರು ಅಳಲು ತೋಡಿಕೊಂಡಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ವಿಜಯಪುರ
PublicNext
11/03/2026 08:00 pm
LOADING...