ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಪ್ರಧಾನಿ ಮೋದಿ ಮಾತು, ಇಂಡಿ ಲಿಂಬೆ ರೈತರಲ್ಲಿ ಹೊಸ ಹುಮ್ಮಸ್ಸು!

ವಿಜಯಪುರ: ರಾಜ್ಯದಲ್ಲಿ 9 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಲಿಂಬೆ ಬೆಳೆಯಲಾಗುತ್ತಿದೆ. ಅದರಲ್ಲಿ ಶೇಕಡಾ 85 ರಷ್ಟು ಲಿಂಬೆ ವಿಜಯಪುರ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ. ಹೀಗಾಗಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕನ್ನು ಲಿಂಬೆ ಕಣಜ ಎಂದು ಪ್ರಸಿದ್ಧವಾಗಿದೆ. ಅಪೆಡಾ ಸಂಸ್ಥೆ ಸಹಯೋಗದೊಂದಿಗೆ ಯುಎಇ, ಮಾಲ್ಡೀವ್ಸ್, ಯುಕೆ ಸೇರಿದಂತೆ ಅನೇಕ ದೇಶಗಳಿಗೆ ಇಂಡಿಯ ಕಾಗ್ಜಿ ತಳಿಯ ಲಿಂಬೆ ರಫ್ತಾಗುತ್ತಿದೆ. ವಿಶ್ವಮಾನ್ಯತೆ ಪಡೆದಿರೋ ಇಂಡಿ ಲಿಂಬೆ ಹಣ್ಣು ತೆಳುವಾದ ತೊಗಟೆ, ಹೆಚ್ಚು ರಸಭರಿತವಾದ ಸಿಟ್ರಿಕ್ ಆಮ್ಲ, ಸುವಾಸನೆ ದುಂಡನೆ ಹಣ್ಣು ಕಾಗ್ಜಿ ತಳಿಯ ವಿಶೇಷತೆ.

ಹೀಗಾಗಿ ಇಂಡಿಯ ಕಾಗ್ಜಿ ತಳಿಗೆ ಜಿಐ ಟ್ಯಾಗ್ ದೊರೆತಿದೆ. ಮನ್ ಕಿ ಬಾತ್ ನಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿ ಲಿಂಬೆ ಬಗ್ಗೆ ಮಾತನಾಡಿದ್ದು ಮತ್ತಷ್ಟು ಲಿಂಬೆ ರಫ್ತಾಗುವುದು ಜೊತೆಗೆ ದರ ಹೆಚ್ಚಳ ಆಗುವ ಸಾಧ್ಯತೆಯಿದೆ ಅನ್ನೋದು ರೈತರ ಮಾತಾಗಿದೆ...

ಇಂಡಿ ಪಟ್ಟಣದಲ್ಲಿ ಲಿಂಬೆ ಅಭಿವೃದ್ಧಿ ಮಂಡಳಿಯ ಮೂಲಕ ಲಿಂಬೆ ಹಣ್ಣಿಗೆ ಜಿಐ ಟ್ಯಾಗ್ ದೊರಕಿಸುವಲ್ಲಿ ಮಹತ್ತರ ಪಾತ್ರವಹಿಸಿದೆ. ಲಿಂಬೆಗೆ ಜಿಐ ಟ್ಯಾಗ್ ದೊರೆತಿರೋ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ನಲ್ಲಿ ಪ್ರಸ್ತಾಪಿಸಿದ್ದು ದೇಶದೆಲ್ಲೆಡೆ ಗಮನ ಸೆಳೆದಿದೆ‌. ಪ್ರಧಾನಿ ಅವರು ಮನ್ ಕಿ ಬಾತ್ ನಲ್ಲಿ ಕರ್ನಾಟಕ ರಾಜ್ಯದ ಲಿಂಬೆ ಬೆಳೆಯ ಬಗ್ಗೆ ಮಾತನಾಡಿದ್ದಕ್ಕೆ ಜಿಲ್ಲೆಯ ರೈತರಿಗೆ ಸಂತಸ ಉಂಟು ಮಾಡಿದೆ, ನಾವು ಜಿಲ್ಲೆ ರೈತರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಮನ್ ಕಿ ಬಾತ್ ನಲ್ಲಿ ಮಾತನಾಡಿದ್ದಕ್ಕೆ ಜಿಲ್ಲೆಯ ರೈತರಿಗೆ ಹೆಚ್ಚಿನ ಬಲ ಬಂದಿದೆ.

ಹೀಗಾಗಿ ಲಿಂಬೆ ಉತ್ಪಾದನೆ ಮಾಡಲು ಹೆಚ್ಚಿನ ಆಸಕ್ತಿ ಬಂದಿದ್ದು, ಈಗ ಲಿಂಬೆಗೆ ಇನ್ನಷ್ಟು ದರ ಸಿಗುವ ಸಾಧ್ಯತೆ ಇದೆ ಎಂಬುದು ರೈತರ ಮಾತು...ಪ್ರಧಾನಿ ಮೋದಿ ಅವರು ಈಗಾಗಲೇ 60ಕ್ಕೂ ಅಧಿಕ ದೇಶಗಳಲ್ಲಿ ಪ್ರೀ ಟ್ರೇಡ್ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ. ಈಗ ಮನ್ ಕಿ ಬಾತ್ ನಲ್ಲಿ ಲಿಂಬೆಯ ಕುರಿತು ಮಾತನಾಡಿದ್ದು ರೈತರ ಬಲ‌ ಇಮ್ಮಡಿ‌ಗೊಳಿಸಿದೆ. ಇನ್ನೂ ವಿಜಯಪುರ ಜಿಲ್ಲೆಯಲ್ಲಿನ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡರೆ ವಿದೇಶಗಳಿಗೆ ಸಹಿತ ಜಿಲ್ಲೆಯ ಲಿಂಬೆ ಕಳಿಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಆದಷ್ಟು ಬೇಗ ವಿಮಾನ‌ ನಿಲ್ದಾಣದ ಕಾಮಗಾರಿ ಪೂರ್ಣಗೊಳಿಸಲು ಎಂಬುದು ನಮ್ಮ ಒತ್ತಾಯ...

Edited By :
PublicNext

PublicNext

08/03/2026 02:40 pm

Cinque Terre

15.17 K

Cinque Terre

0