ತುಮಕೂರು ನಗರದಲ್ಲಿ ಪುಂಡರ ಅಟ್ಟಹಾಸ ಮಿತಿಮೀರಿದೆ. ಹಾಡಹಗಲೇ ಯುವಕನ ಮೇಲೆ ಪುಂಡರು ಅಟ್ಟಹಾಸ ಮೆರೆದಿದ್ದು ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ತುಮಕೂರು ನಗರದ ಮೇಲೆಕೋಟೆ ಮುಖ್ಯರಸ್ತೆಯ ಇಸ್ರಾ ಶಾದಿ ಮಹಲ್ ಬಳಿಯ ಗುಲ್ಷನ್ ಬಟ್ಟೆ ಅಂಗಡಿ ಬಳಿಯ ಹೋಟೆಲ್ ಗ್ರೀನ್ ವೆಜಿಟೀರಿಯನ್ ಹೋಟೆಲ್ ಬಳಿ ಕೃತ್ಯ ನಡೆದಿದೆ. ಮೃತ ಯುವಕನನ್ನು ಮುಬಾರಕ್ ಪಾಷಾ (28) ಎಂದು ತಿಳಿದು ಬಂದಿದ್ದು ಹಣದ ವ್ಯವಹಾರವೇ ಹತ್ಯೆಗೆ ಕಾರಣ ಎನ್ನಲಾಗುತ್ತಿದೆ.
ಮುಬಾರಕ್ ಹೋಟೆಲ್ ಬಳಿಗೆ ಬಂದಾಗ ಯುವಕ ಮುಬಾರಕ್ ಮೇಲೆ ಎರಗಿದ ಪುಂಡರು ಕುತ್ತಿಗೆ ಹಾಗೂ ಮುಖಕ್ಕೆ ಇರಿದು ಪರಾರಿಯಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಮುಬಾರಕ್ ನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆವೇಳೆಗೆ ಮುಬಾರಕ್ ಮೃತಪಟ್ಟಿದ್ದ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಆಡಿಷನಲ್ ಎಸ್‌ಪಿ ಪುರುಷೋತ್ತಮ್, ಹಾಗೂ ಗೋಪಾಲ್ ಭೇಟಿ ನೀಡಿ ಪರಿಶೀಲಿಸಿದರು.
PublicNext
10/03/2026 07:37 pm
LOADING...