ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗ್ಯಾರಂಟಿ ಅಧ್ಯಕ್ಷರಿಂದ ಪ್ರಗತಿ ಪರಿಶೀಲನೆ ಸಭೆ!

ರಾಮನಗರ - ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಕೆ.ರಾಜು ಪ್ರಗತಿಪರಿಶೀಲನಾ ಸಭೆ ನಡೆಸಿದರು.

ಗೃಹಲಕ್ಷ್ಮಿ ಯೋಜನೆಯ ಕುರಿತಾಗಿ ಅಂಗನವಾಡಿ ಕಾರ್ಯಕರ್ತೆಯರ ಜೊತೆಗೆ ಚರ್ಚೆ ನಡೆಸಿದರು. ಸಾವನ್ನಪ್ಪಿರುವ ಮಹಿಳೆಯರ ಮಾಹಿತಿಯನ್ನ ಈ ಕೂಡಲೇ ಕಲೆಹಾಕಿ ಮಾಹಿತಿ ಕೊಡಬೇಕೆಂದು ಸಭೆಯಲ್ಲಿ ಸೂಚಿಸಿದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿ ಚನ್ನಪಟ್ಟಣ ಅಧ್ಯಕ್ಷ ರಂಗನಾಥ್, ಅಧಿಕಾರಿಗಳು ಸೇರಿ ಹಲವರು ಉಪಸ್ಥಿತಿ ಇದ್ದರು.

Edited By :
PublicNext

PublicNext

11/03/2026 08:40 am

Cinque Terre

14.14 K

Cinque Terre

0