ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿ ಗ್ರಾಮದಲ್ಲಿ ಶನಿವಾರ "ವಿಶೇಷ ದಾಖಲಾತಿ ಆಂದೋಲನ"ದ ಅಂಗವಾಗಿ ಜಾಗೃತಿ ಜಾಥಾ ನಡೆಯಿತು.
ಹಳಿಂಗಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪುಟಾಣಿ ವಿದ್ಯಾರ್ಥಿಗಳು "ಆರು ವರ್ಷದ ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸಿ!", "ಸರಕಾರಿ ಶಾಲೆ ಉಳಿಸಿ!", "ಎಲ್.ಕೆ.ಜಿ, ಯು.ಕೆ.ಜಿ ಉಚಿತ!" ಎಂಬ ಘೋಷಣೆಗಳನ್ನು ಕೂಗುತ್ತಾ ಗ್ರಾಮದ ಬೀದಿಗಳಲ್ಲಿ ಸಂಚರಿಸಿದರು.
ಶಾಲೆಯಿಂದ ಹೊರಟ ಈ ಜಾಥಾ ಅಲ್ಲಮಪ್ರಭು ದೇವಸ್ಥಾನ, ಗ್ರಾಮ ಪಂಚಾಯತಿ, ಪಿಕೆಪಿಎಸ್, ಬಸ್ ನಿಲ್ದಾಣ ಮಾರ್ಗವಾಗಿ ಸಾಗಿ, ಮತ್ತೆ ಶಾಲೆಗೆ ಮರಳಿತು. ದಾರಿಯುದ್ದಕ್ಕೂ ಮಕ್ಕಳು ನಾಮಫಲಕಗಳನ್ನು ಹಿಡಿದು, ರೈತಾಪಿ ಜನರಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಶಾಲೆಯ ಮುಖ್ಯಗುರು ಎ.ಬಿ.ಕಂಚಗೊಂಡ, "ಸರಕಾರಿ ಶಾಲೆಯಲ್ಲಿ ಎಲ್.ಕೆ.ಜಿ, ಯು.ಕೆ.ಜಿ ಯಿಂದ ಏಳನೇ ತರಗತಿಯವರೆಗೆ ಉಚಿತ ದಾಖಲಾತಿ ಸೌಲಭ್ಯವಿದೆ. ಪೋಷಕರು ಈ ಸರ್ಕಾರದ ಯೋಜನೆಯ ಸದುಪಯೋಗ ಪಡೆದುಕೊಂಡು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ದಾಖಲಿಸಬೇಕು" ಎಂದು ಮನವಿ ಮಾಡಿದರು. ಜಾಥಾದಲ್ಲಿ ಮುಖ್ಯಗುರು ಎ.ಬಿ.ಕಂಚಗೊಂಡ ಅವರೊಂದಿಗೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC) ಅಧ್ಯಕ್ಷ ಪರಪ್ಪ ಘೂಳನ್ನವರ, ಉಪಾಧ್ಯಕ್ಷ ಮಹಿರಾಜ ಲಾಡಖಾನ್ ಹಾಗೂ ಶಾಲಾ ಶಿಕ್ಷಕರು ಭಾಗವಹಿಸಿದ್ದರು.
Kshetra Samachara
14/03/2026 02:11 pm
LOADING...