ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಮದಡ್ಡಿ ಜಾತ್ರೆಗೆ ಸಜ್ಜು: ಯುಗಾದಿ ಅಮವಾಸ್ಯೆಯಿಂದ ಮೂರು ದಿನ ಭಕ್ತಿ ಸಂಭ್ರಮ!

ರಬಕವಿ-ಬನಹಟ್ಟಿ ( ತೇರದಾಳ) :ತಾಲೂಕಿನ ಕೃಷ್ಣಾ ತೀರದ ತಮದಡ್ಡಿ ಗ್ರಾಮದ ಆರಾಧ್ಯದೈವ ಚಂದ್ರಗಿರಿದೇವಿ ಹಾಗೂ ಶ್ರೀ ಗುರು ಚಕ್ರವರ್ತಿ ಗಂಗಾಧರ ಸ್ವಾಮೀಜಿಯವರ ಜಾತ್ರಾ ಮಹೋತ್ಸವವು ಯುಗಾದಿ ಅಮವಾಸ್ಯೆ ದಿನವಾದ ಮಾ.18ರಿಂದ ಮಾ.20ರವರೆಗೆ ಜರುಗಲಿದೆ ಎಂದು ಶ್ರೀಮಠದ ಸೋಮಯ್ಯ ಮಠದ ಸ್ವಾಮೀಜಿ ತಿಳಿಸಿದ್ದಾರೆ.

ಅವರು ಗ್ರಾಮದ ಮಠದಲ್ಲಿ ಶುಕ್ರವಾರ ಜಾತ್ರಾ ಜಾಹಿರಾತು ಪ್ರತಿಗಳನ್ನು ಬಿಡುಗಡೆ ಮಾಡಿ ಮಾತನಾಡಿ, ಮಾ.18 ರಂದು ಸಂಜೆ ಪಲ್ಲಕ್ಕಿ ಉತ್ಸವ, ಅಂದು ರಾತ್ರಿ ಹೊಸೂರ ದುರ್ಗಾದೇವಿ ಚೌಡಕಿ ಗಾಯನ ಸಂಘ ಮತ್ತು ಬೆಳಗಲಿಯ ಭರಮಲಿಂಗೇಶ್ವರ ಗಾಯನ ಸಂಘದಿಂದ ಚೌಡಕಿ ಪದಗಳ ಗಾಯನ ಪ್ರಸ್ತುತಿ, ಮಾ.19ರಂದು ರಾತ್ರಿ 8ಗಂಟೆಗೆ ರಥೋತ್ಸವ ಜರುಗಲಿದ್ದು, ರಥೋತ್ಸವ ಕಾರ್ಯಕ್ರಮವು ಹೊಳೆಬಬಲಾದಿ ಮೂಲಸಂಸ್ಥಾನಮಠದ ಓಂಕಾರಯ್ಯ ಆನಂದಯ್ಯ ಹಿರೇಮಠ ಮತ್ತು ಸೋಮಯ್ಯ ಶ್ರೀ ಸಮ್ಮುಖದಲ್ಲಿ ನೆರವೇರುವುದು. ಮಾ.20ರಂದು ಅನ್ನಸಂತರ್ಪಣೆ ಹಾಗೂ ಜಂಗಿ ನಿಕಾಲಿ ಕುಸ್ತಿಗಳನ್ನು ಹಮ್ಮಿಕೊಳ್ಳಲಾಗಿದೆ.

ಜಾತ್ರೆ ಅಂಗವಾಗಿ 4ಗಾಲಿ ಟ್ರೇಲರ್-ಟ್ರಾಕ್ಟರ್ ರಿವರ್ಸ ಸ್ಪರ್ಧೇ, ಜೋಡೆತ್ತಿನ ಒಂದು ನಿಮಿಷದ ಬಂಡಿ ಸ್ಪರ್ಧೆ, ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆ, ಚೀಲ ಎತ್ತುವ ಸ್ಪರ್ಧೆ, ಗುಂಡು ಎತ್ತುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಪತ್ರಿಕಾ ಬಿಡುಗಡೆ ಸಮಾರಂಭದಲ್ಲಿ ಸೋಮಯ್ಯ ಮಠದ ಶ್ರೀ, ಜಾತ್ರಾ ಕಮಿಟಿ ಅಧ್ಯಕ್ಷ ಲಕ್ಷ್ಮಣ ಯಾದವಾಡ, ಗಂಗಪ್ಪ ಗೌರಗೊಂಡ, ರಾಮಪ್ಪ ಅಕ್ಕಿವಾಟ, ಸತ್ಯಪ್ಪ ಜಿರಗಾಳ, ಮಲ್ಲಪ್ಪ ಜಿರಗಾಳ, ಸಿದ್ದು ಹುದ್ದಾರ, ಅಪ್ಪಾಸಾಬ ಅಕ್ಕಿವಾಟ ಸೇರಿದಂತೆ ಸದ್ಭಕ್ತರು ಇದ್ದರು.

Edited By : PublicNext Desk
Kshetra Samachara

Kshetra Samachara

14/03/2026 02:16 pm

Cinque Terre

1.8 K

Cinque Terre

0