ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿಯ ಕೇಂದ್ರ ಕಾರಾಗೃಹದಿಂದ ಸನ್ನಡತೆ ಆಧಾರದ ಮೇಲೆ ಮೂವರ ಬಿಡುಗಡೆ

ಬಳ್ಳಾರಿ : ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿದ್ದ ಮೂವರು ಶಿಕ್ಷಾ ಬಂಧಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ. ಎಚ್.ಕೆ. ರವಿಕುಮಾರ, ಜೆ.ಎಲ್.ಮೋಹನಕುಮಾರ, ಮಂಜಾನಾಯ್ಕ ಎಂಬುವವರನ್ನು ಸರ್ಕಾರದ ಬಿಡುಗಡೆಗೆ ಪರಿಗಣಿಸಿತ್ತು.

ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌ ಅವರು ಮೂವರು ಶಿಕ್ಷಾ ಬಂಧಿಗಳಿಗೆ ಬಿಡುಗಡೆ ಪ್ರಮಾಣ ಪತ್ರ ವಿತರಿಸಿದರು. ಈ ವೇಳೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ರಾಜೇಶ ಹೊಸಮನೆ, ಕೇಂದ್ರ ಕಾರಾಗೃಹದ ಅಧೀಕ್ಷಕಿ ಲತಾ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.

Edited By :
PublicNext

PublicNext

14/03/2026 02:20 pm

Cinque Terre

11.34 K

Cinque Terre

0

ಸಂಬಂಧಿತ ಸುದ್ದಿ