ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ವಿವಿಧ ಗ್ರಾಮಗಳಲ್ಲಿ ಭಾನುವಾರ ಪವರ್ ಕಟ್: ಮೆಸ್ಕಾಂ ಪ್ರಕಟಣೆ

ಚಿಕ್ಕಮಗಳೂರು: ಗ್ರಾಮೀಣ ಉಪವಿಭಾಗದ ಮುಗುಳವಳ್ಳಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ಮಾರ್ಚ್ 15ರಂದು ( ನಾಳೆ ಭಾನುವಾರ) ಶಕ್ತಿ ಪರಿವರ್ತಕದ ನಿರ್ವಹಣಾ ಕಾರ್ಯ ನಡೆಯಲಿದೆ.

ಅಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಈ ಕೆಲಸ ಮುಂದುವರಿಯಲಿದ್ದು, ಇದರಿಂದಾಗಿ ಕಳಸಾಪುರ ಫೀಡರ್ ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಈ ಅವಧಿಯಲ್ಲಿ ಕಳಸಾಪುರ, ದೇವಗೊಂಡನಹಳ್ಳಿ, ಲಕ್ಕುಮನಹಳ್ಳಿ, ಕುನ್ನಾಳು, ಸಿರಬಡಿಗೆ, ಭೂಚೇನಹಳ್ಳಿ, ಬೆಳವಾಡಿ, ನರಸೀಪುರ, ಸಿಂದಿಗೆರೆ, ಮಾಚೇನಹಳ್ಳಿ, ಈಶ್ವರಹಳ್ಳಿ, ಕೆ.ಬಿ.ಹಾಳು ಮತ್ತು ಗಾಳಿಹಳ್ಳಿ ಸೇರಿದಂತೆ ಅಕ್ಕಪಕ್ಕದ ಹಲವು ಹಳ್ಳಿಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ. ಸಾರ್ವಜನಿಕರು ಮತ್ತು ಗ್ರಾಹಕರು ಇಲಾಖೆಯ ಕೆಲಸದ ಅವಧಿಯಲ್ಲಿ ಸಹಕರಿಸಬೇಕೆಂದು ಮೆಸ್ಕಾಂ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್‌ ಅವರು ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

14/03/2026 09:23 pm

Cinque Terre

1.54 K

Cinque Terre

0