ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಬೆಂಕಿ ಅನಾಹುತ, ಕಾಫಿ ಬೆಳೆಗಾರನ ಶೆಡ್ ಭಸ್ಮ, ಲಕ್ಷಾಂತರ ರೂಪಾಯಿ ನಷ್ಟ

ಚಿಕ್ಕಮಗಳೂರು: ಶೆಡ್‌ಗೆ ಬೆಂಕಿ ಬಿದ್ದ ಪರಿಣಾಮ , ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬೆಟ್ಟದಮಳಲಿ ಗ್ರಾಮದಲ್ಲಿ ನಡೆದಿದೆ. ಮಂಜುನಾಥ್ ಗೌಡ ಅವರಿಗೆ ಸೇರಿದ ಈ ಶೆಡ್‌ನಲ್ಲಿದ್ದ ಜನರೇಟರ್, ನೀರಿನ ಪಂಪ್, ಪೈಪ್ ಹಾಗೂ ಗೊಬ್ಬರ ಸೇರಿದಂತೆ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಹಾನಿಯಾಗಿದೆ.

ಇದು ದುಷ್ಕರ್ಮಿಗಳ ಕೃತ್ಯವೆಂದು ಶಂಕಿಸಲಾಗಿದ್ದು, ಈ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬೆಳೆಗಾರ ಸಂಘದ ಮುಖಂಡರು ಸಂತ್ರಸ್ತ ರೈತನಿಗೆ ಸಾಂತ್ವನ ಹೇಳಿದ್ದಾರೆ ಹಾಗೂ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

Edited By :
PublicNext

PublicNext

21/03/2026 08:40 pm

Cinque Terre

6.67 K

Cinque Terre

0

ಸಂಬಂಧಿತ ಸುದ್ದಿ