ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಲಿಕೆಯಿಂದ ಮನೆಬಾಗಿಲಿಗೆ ಇ-ಖಾತೆ ತಲುಪಿಸುವ ವಿಶೇಷ ಅಭಿಯಾನ

ತುಮಕೂರು ಮಹಾನಗರ ಪಾಲಿಕೆ ಹೊಸ ಇತಿಹಾಸ ಬರೆಯುವತ್ತ ಹೆಜ್ಜೆ ಇಟ್ಟಿದೆ. ಇ - ಖಾತೆಗಾಗಿ ಜನರನ್ನು ಹೈರಾಣಾಗಿಸಿದ್ದ ಪಾಲಿಕೆ ಸಿಬ್ಬಂದಿ ರಾಜ್ಯದಲ್ಲೇ ಪ್ರಥಮ ಎಂಬಂತೆ ಮನೆಬಾಗಿಲಿಗೆ ಇ-ಖಾತೆ ತಲುಪಿಸುವ ವಿಶೇಷ ಅಭಿಯಾನಕ್ಕೆ ಮುಂದಾಗಿದೆ.

ಮೊದಲ ದಿನವೇ 72 ಇ-ಖಾತೆಗಳನ್ನು ಮನೆ ಬಾಗಿಲಿಗೆ ತೆರಳಿ ನೀಡಲಾಗಿದೆ. 125 ಹೊಸದಾಗಿ ಇ-ಖಾತೆಗೆ ಅರ್ಜಿ ಸ್ವೀಕರಿಸಿದ್ದು, 42 ಅರ್ಜಿಗಳನ್ನು ಡಿಜಿಟಲೀಕರಣ ಗೊಳಿಸಲಾಗಿದೆ. ನಗರದ ಮಹಾನಗರ ಪಾಲಿಕೆ ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಮುಂಭಾಗ ಇ-ಆಸ್ತಿ ಅಂದೋಲನಕ್ಕೆ ಪಾಲಿಕೆ ಆಯುಕ್ತ ಬಿ.ಶುಭ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ವಾರ್ಡ್ ನಂ. 31ರಿಂದ 35ರ ವ್ಯಾಪ್ತಿಯಲ್ಲಿ ಬರುವ ಬಡಾವಣೆಗಳ ನಾಗರಿಕರಿಗಾಗಿ ಸಿದ್ದರಾಮೇಶ್ವರ ಬಡಾವಣೆಯ ಬಸವ ಭವನದಲ್ಲಿ ಇ-ಆಸ್ತಿ ಅಂದೋಲನ ನಡೆಸಲಾಯಿತು. ಸಾರ್ವಜನಿಕರಿಂದ 125 ಅರ್ಜಿ ಸ್ವೀಕರಿಸಲಾಯಿತು. ಇದರಲ್ಲಿ 42 ಅರ್ಜಿಗಳನ್ನು ಅಪ್‌ಲೋಡ್ ಮಾಡಿದ್ದು, ಮೊದಲ ದಿನ 72 ಇ-ಖಾತೆಗಳನ್ನು ಮನೆಬಾಗಿಲಿಗೆ ತಲುಪಿಸಲಾಯಿತು.

ಕ್ಯಾತಸಂದ್ರದ ಎಲ್‌ಆರ್ ಬಂಡೇಯ ವಾಸಿಗಳಿಗೆ 20 ಹಕ್ಕುಪತ್ರಗಳನ್ನು ನೀಡಲಾಯಿತು. ಪಾಲಿಕೆ ಉಪ ಆಯುಕ್ತ ಮನುಕುಮಾರ್, ವಲಯ ಆಯುಕ್ತ ನಾಗರಾಜು, ಕಂದಾಯ ಅಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ಸಿಬ್ಬಂದಿಗಳು ಈ ವೇಳೆ ಉಪಸ್ಥಿತದ್ದರು.

Edited By : PublicNext Desk
Kshetra Samachara

Kshetra Samachara

15/03/2026 01:14 pm

Cinque Terre

540

Cinque Terre

0

ಸಂಬಂಧಿತ ಸುದ್ದಿ