ತುಮಕೂರು : ಎಡಪಂಥಿ, ಬಲಪಂಥಿ ಎಂಬ ಮನೋಭಾವನೆಯನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ತುಂಬಿ ಕಲ್ಮಶಗೊಳಿಸುತ್ತಿರುವ ಸ್ವಾರ್ಥ ಸಂಘಟನೆಗಳ ನಡುವೆ ಮೌಢ್ಯದಿಂದ ಹೊರಬಂದು ಮೌಲ್ಯಗಳ ದಾರಿಯಲ್ಲಿ ಸಾಗಿ ಮೌನ ಕ್ರಾಂತಿ ಮಾಡುತ್ತಾ ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳ ಬಂಧುತ್ವ ಬೆಸಯುತ್ತಿರುವ ಆಶಯದ ಮಾನವ ಬಂಧುತ್ವ ವಿದ್ಯಾರ್ಥಿ ವೇದಿಕೆ ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಬಂದಿದೆ.
ನಗರದ ಕ್ಯಾತ್ಸಂದ್ರ ಬಳಿಯ ಡಾ.ಪುನೀತ್ ರಾಜ್‌ಕುಮಾರ್ ಬಡಾವಣೆ ಬಸ್‌ನಿಲ್ದಾಣದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಮಾನವ ಬಂಧುತ್ವ ವಿದ್ಯಾರ್ಥಿ ವೇದಿಕೆಯಿಂದ ಹಮ್ಮಿಕೊಂಡಿದ್ದ ನಟ ಡಾ.ಪುನಿತ್ ರಾಜ್‌ಕುಮಾರ್ ಜನ್ಮದಿನಾಚರಣೆಯಲ್ಲಿ ಸಮಾಜಸ್ನೇಹಿ ನಟ ಪುನಿತ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಲಾಯಿತು.
ಬೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಟಿ. ಗುರುರಾಜ್ ಅವರು ಮಾನವ ಬಂಧುತ್ವ ವೇದಿಕೆ ಆಶ್ರಯದಲ್ಲಿ ಅಸ್ಥಿತ್ವಕ್ಕೆ ಬಂದಿರುವ ವಿದ್ಯಾರ್ಥಿ ಬಂಧುತ್ವ ವೇದಿಕೆ ಹಾಗೂ ಕರ್ನಾಟಕ ಪ್ರತಿಭಾ ಆಕಾಡೆಮಿ ಆಶ್ರಯದಲ್ಲಿ ನಡೆದ ಕರ್ನಾಟಕ ರತ್ನ ಡಾ. ಪುನೀತ್‌ರಾಜ್‌ಕುಮಾರ್ ಅವರ ಜನ್ಮ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿದರು.
ವಿದ್ಯಾರ್ಥಿ ಬಂಧುತ್ವ ವೇದಿಕೆ ಉದಯಿಸಿದ್ದು ನಾಡಿನ ಮುಂದಿನ ಭವಿಷ್ಯ ಮುಂದಿನ ಭವಿಷ್ಯ ಇಂದಿನ ವಿದ್ಯಾರ್ಥಿಗಳು, ಹಾಗಾಗಿ ವಿದ್ಯಾರ್ಥಿ ಬಂಧು ನಾವೇಲ್ಲಾ ಒಂದು. ನಾಡು, ನುಡಿ, ಹಾಗೂ ನೊಂದ ಜನರ ರಕ್ಷಣೆಗೆ ನಾವೆಲ್ಲಾ ಮುಂದು ಎಂಬ ಘೋಷಣೆಯೊಂದಿಗೆ ವಿದ್ಯಾರ್ಥಿ ಬಂಧುತ್ವ ವೇದಿಕೆ ಜಿಲ್ಲೆಯಾದ್ಯಂತ ಸಂಚಲನ ಮೂಡುಸುತ್ತಿದೆ ಎಂದು ಹೇಳಿದರು.
ವೇದಿಕೆ ಸಂಚಾಲಕ ಎಚ್. ಸಾಗರ್ ಮಾತನಾಡಿ, ಪುನೀತ್‌ರಾಜ್‌ಕುಮಾರ್ ಜನ್ಮ ದಿನ ಆಚರಣೆ ಮಾಡಿದರೆ ಸಾಲದು ಅವರ ಆದರ್ಶಗಳನ್ನು ನಮ್ಮ ಬದುಕಿನ ಜೊತೆ ಅವರ ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಈ ದೇಶದ ಭವಿಷ್ಯ ಭರವಸೆಯ ಬೆಳಕು, ಸಂಪತ್ತು ಹಾಗಾಗಿ ಜಾತಿ, ಮತ, ಭಾಷೆ ಹಾಗೂ ಮೇಲು ಮತ್ತು ಕೀಳು ಎಂಬ ಬೇಧಭಾವ ತೊರೆದು ಒಂದಾಗಿ ದೇಶ ಕಟ್ಟುವ ಕಾರ್ಯಕ್ಕೆ ಸಂಕಲ್ಪ ಮಾಡಬೇಕು ಎಂದರು.
ವೇದಿಕೆಯಲ್ಲಿ ಕರ್ನಾಟಕ ಪ್ರತಿಭಾ ಅಕಾಡಮಿ ಜಿಲ್ಲಾ ಉಸ್ತುವಾರಿ ಮಂಜುನಾಥ್ ಎಲ್ (ಸಂಜು ) ಹಾಗೂ ಆಟೋಚಾಲಕರ ಮುಖಂಡ ನವೀನ್ ಕುಮಾರ್ ಮಾತನಾಡಿದರು, ತುಮಕೂರು ವಿಭಾಗೀಯ ಸಂಚಾಲಕ ಪ್ರತಾಪ್ ಮದಕರಿ ವಿದ್ಯಾರ್ಥಿ ಬಂಧುತ್ವ ವೇದಿಕೆಯನ್ನು ಅಭಿನಂದಿಸಿ ಮಾತನಾಡಿದರು. ಹಲವಾರು ಸಂಘಟನೆಯ ಹಿರಿಯ ಮುಖಂಡರು ವೇದಿಕೆಯಲ್ಲಿದ್ದರು.
Kshetra Samachara
18/03/2026 08:15 am