ಶಿವಮೊಗ್ಗ: ಜಿಲ್ಲೆಯಾದ್ಯಂತ ವರುಣನ ಅಬ್ಬರ ಮುಂದುವರಿದಿದ್ದು, ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಇಂದು ಸಂಜೆ ಭಾರಿ ಮಳೆಯಾಗಿದೆ. ಮಳೆಯೊಂದಿಗೆ ಬೀಸಿದ ವೇಗವಾದ ಗಾಳಿಯಿಂದಾಗಿ ಅವಾಂತರಗಳು ಸಂಭವಿಸಿವೆ.
ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ಭಾರಿ ಗಾಳಿಗೆ ಸಿಲುಕಿ ರತ್ನಮ್ಮ ಎಂಬುವವರ ಹಂಚಿನ ಮನೆಯ ಮೇಲೆ ಬೃಹತ್ ತೆಂಗಿನಮರ ಉರುಳಿ ಬಿದ್ದಿದೆ. ಮರ ಬೀಳುವ ಸಂದರ್ಭದಲ್ಲಿ ಮನೆಯೊಳಗೆ ಐವರು ಸದಸ್ಯರಿದ್ದರು. ಅದೃಷ್ಟವಶಾತ್ ಎಲ್ಲರೂ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮರ ಬಿದ್ದ ರಭಸಕ್ಕೆ ಹಂಚಿನ ಮನೆಗೆ ತೀವ್ರ ಹಾನಿಯಾಗಿದೆ.
ಮರ ಬಿದ್ದ ನಂತರ ಸುರಿದ ಮಳೆಯಿಂದಾಗಿ ಮನೆಯೊಳಗೆಲ್ಲ ನೀರು ನುಗ್ಗಿ ಸಾಮಗ್ರಿಗಳಿಗೆ ಹಾನಿಯಾಗಿದೆ.
PublicNext
15/03/2026 10:17 pm
LOADING...