ಶಿವಮೊಗ್ಗ: ನಗರದಲ್ಲಿ ಸಂಜೆ ವೇಳೆಗೆ ಭಾರಿ ಗುಡುಗು, ಮಿಂಚು, ಆಲಿಕಲ್ಲು ಸಹಿತ ಜೋರು ಮಳೆಯಾಗುತ್ತಿದೆ. ಸಂಜೆಯಾಗುತ್ತಿದ್ದಂತೆ ದಟ್ಟ ಮೋಡ ಆವರಿಸಿಕೊಂಡು ಮಳೆ ಶುರುವಾಗಿದೆ.
ಸಂಜೆ 4 ಗಂಟೆಯಿಂದಲೇ ಶಿವಮೊಗ್ಗ ನಗರದಲ್ಲಿ ದಟ್ಟ ಮೋಡ ಆವರಿಸಿಕೊಂಡಿತ್ತು. 4:40ರ ಹೊತ್ತಿಗೆ ಆಲಿಕಲ್ಲು ಸಹಿತ ಮಳೆ ಆರಂಭವಾಯಿತು. ಆಲಿಕಲ್ಲು ಬೀಳುತ್ತಿದ್ದಂತೆ ಜನ ಅವುಗಳನ್ನು ಆರಿಸಿಕೊಂಡು ಖುಷಿಪಟ್ಟರು. ಆದರೆ ಒಮ್ಮೆಲೆ ಭಾರಿ ಸಂಖ್ಯೆಯ ಆಲಿಕಲ್ಲು ಬೀಳುತ್ತಿದ್ದಂತೆ ಹಲವರು ಪೆಟ್ಟು ತಿಂದು ಕಟ್ಟಡಗಳ ಒಳಗೆ, ಕೆಳಗೆ ರಕ್ಷಣೆ ಪಡೆಯುವಂತಾಯಿತು.
ಇನ್ನು, ಗುಡುಗು, ಮಿಂಚು ಮತ್ತು ಗಾಳಿಯ ಅಬ್ಬರ ಜೋರಾಗಿದೆ. ಗಾಳಿಯ ರಭಸಕ್ಕೆ ಮರದ ರೆಂಬೆ ಕೊಂಬೆಗಳು ಆತಂಕ ಹುಟ್ಟಿಸುವ ರೀತಿ ಅಲುಗಾಡುತ್ತಿವೆ. ಇನ್ನು, ಗುಡುಗು ಮತ್ತು ಮಿಂಚು ಕೂಡ ಜೋರಾಗಿದೆ.
Kshetra Samachara
18/03/2026 07:05 pm
LOADING...