ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎರಡು ಲಾರಿಗಳ ಮಧ್ಯೆ ಅಪಘಾತ : ಓರ್ವ ಸ್ಥಳದಲ್ಲೇ ಸಾವು

ಬೆಳಗಾವಿ: ಎರಡು ಲಾರಿಗಳ ಮಧ್ಯೆ ರಸ್ತೆ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.

ಬೆಳಗಾವಿ ತಾಲೂಕಿನ ಹಿರೇಬಾಗೆವಾಡಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಓರ್ವ ಲಾರಿ ಚಾಲಕ ಸಾವನ್ನಪ್ಪಿದ್ದಾನೆ. ಕೆಮಿಕಲ್ ಸಿಮೆಂಟ್ ಮತ್ತು ಈರುಳ್ಳಿ ತುಂಬಿಕೊಂಡು ಹೋಗ್ತಿದ್ದ ಎರಡು ಲಾರಿಗಳ ಮಧ್ಯೆ ಅಪಘಾತವಾಗಿ, ಅಪಘಾತ ರಭಸಕ್ಕೆ ಲಾರಿ ಮತ್ತು ಅದರಲ್ಲಿ ಲಕ್ಷಾಂತರ ಮೌಲ್ಯದ 842ಚೀಲ ಈರುಳ್ಳಿ ಮಣ್ಣುಪಾಲಾಗಿದೆ.

ಈ ಘಟನೆಯಲ್ಲಿ ಕೆಮಿಕಲ್ ಸಿಮೆಂಟ್ ತುಂಬಿಕೊಂಡು ಓಡಿಸುತ್ತಿದ್ದ ಲಾರಿ ಚಾಲಕ ಸಾವಿಗೀಡಾಗಿದ್ದಾನೆ ಎಂದು ತಿಳಿದು ಬಂದಿದ್ದು, ಘಟನಾ ಸ್ಥಳಕ್ಕೆ ಹಿರೇಬಾಗೆವಾಡಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಿರೇಬಾಗೆವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : Vinayak Patil
PublicNext

PublicNext

16/03/2026 03:27 pm

Cinque Terre

11.65 K

Cinque Terre

0

ಸಂಬಂಧಿತ ಸುದ್ದಿ