ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಅಕಾಲಿಕ ಮಳೆಗೆ ತೋಟಗಾರಿಕೆ ಬೆಳೆಗಳಿಗೆ ಹಾನಿ

ಬೆಳಗಾವಿ: ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದ ಫಸಲಿಗೆ ಬಂದಿದ್ದ ಹೂಕೋಸು, ಪಾಲಕ್, ಬದನೆಕಾಯಿ ಮತ್ತಿತರ ಬೆಳೆ ಸಂಪೂರ್ಣ ಹಾನಿಯಾಗಿವೆ. ಅಕಾಲಿಕ ಆಲಿಕಲ್ಲು ಮಳೆ ಅವಾಂತರ ಸೃಷ್ಟಿಸಿದ್ದು, ರೈತರು ಕಂಗಾಲಾಗಿದ್ದಾರೆ.

ಧಾರಾಕಾರವಾಗಿ ಸುರಿದ ಮಳೆಗೆ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ. ಲಕ್ಷಾಂತರ ವೆಚ್ಚ ಮಾಡಿ ಬೆಳೆದಿದ್ದ ಬೆಳೆ ಕ್ಷಣಾರ್ಧದಲ್ಲೇ ಮಣ್ಣುಪಾಲಾಗಿದೆ. ಬೆಳಗಾವಿ ಹೊರ ವಲಯದಲ್ಲಿರುವ ವಡಗಾವಿ, ಗಾಂಧಿನಗರದ ಜಮೀನಿನಲ್ಲಿ ರೈತರು ಬೆಳೆದಿದ್ದ ಹೂಕೋಸು, ಪಾಲಕ್, ಸಾಸಿವೆ, ಬದನೆಕಾಯಿ, ಕ್ಯಾಬೇಜ್ ಬೆಳೆ ಸಂಪೂರ್ಣ ಹಾನಿಯಾಗಿವೆ.

ರೈತ ಮಹೇಶ ಬಡಮಂಜಿ ಮತ್ತು ಮೋಹನ ಬಡಮಂಜಿ ಅವರಿಗೆ ಸೇರಿದ ಏಳು ಎಕರೆ ಪ್ರದೇಶದಲ್ಲಿ ಸಾಲಸೋಲ ಮಾಡಿ ಬೆಳೆ ಬೆಳೆದಿದ್ದರು.

ಆದರೆ, ಅಕಾಲಿಕವಾಗಿ ಸುರಿದ ಮಳೆ ಬೆಳೆಯನ್ನು ಆಹುತಿ ಪಡೆದಿದೆ. ಫ್ಲವರ್ ಬೆಳೆಗೆ 80 ಸಾವಿರ ರೂ., ಬದನೆಕಾಯಿ 30 ಸಾವಿರ ರೂ. ಪಾಲಕ್‌ಗೆ 25 ಸಾವಿರ ರೂ., ಸಾಸಿವೆ ಬೆಳೆಗೆ 15 ಸಾವಿರ ರೂ. ಖರ್ಚು ಮಾಡಿದ್ದರು. ಇನ್ನೇನು ಕೊಯ್ಲು ಮಾಡಬೇಕು ಎನ್ನುವಷ್ಟರಲ್ಲಿ ಆಲಿಕಲ್ಲು ಮಳೆ ಬಿದ್ದು ಬೆಳೆ ಹಾನಿ ಮಾಡಿದೆ.

ಬೈಟ್: ಮಹೇಶ ಬಡಮಂಜಿ, ರೈತ

Edited By :
PublicNext

PublicNext

21/03/2026 08:37 am

Cinque Terre

8.67 K

Cinque Terre

0

ಸಂಬಂಧಿತ ಸುದ್ದಿ