ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಮಾರ್ಕಂಡೇಯ ನದಿ ಉಳಿಸಲು ಸ್ವಚ್ಛತಾ ಕಾರ್ಯ

ಬೆಳಗಾವಿ: ಕರ್ನಾಟಕ ರಾಜ್ಯ ರೈತ ಪರ ಹೋರಾಟ ಸಂಘ ಹಾಗೂ ಮಾರ್ಕಂಡೇಯ ನದಿ ಉಳಿಸಿ ತಂಡದಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಬೆಳಗಾವಿ ತಾಲೂಕಿನಲ್ಲಿ ಹಾದು ಹೋಗುವ ಮಾರ್ಕಂಡೇಯ ನದಿ ದಂಡೆ ಮೇಲೆ ಎಲ್ಲಿ ನೋಡಿದರೂ ಅಲ್ಲಿ ಕಸ ರಾಶಿ ಬಿದ್ದಿದ್ದು, ಸ್ವಚ್ಛಗೊಳಿಸಲು ಕರ್ನಾಟಕ ರಾಜ್ಯ ರೈತ ಪರ ಹೋರಾಟ ಸಂಘ ಹಾಗೂ ಮಾರ್ಕಂಡೇಯ ನದಿ ಉಳಿಸಿ ತಂಡದ ಯುವಕರು ಮಣ್ಣೂರ್ ಅಂಬೆವಡಿ ರಸ್ತೆ ಹಿಂಡಲಗಾ ಪಂಪ್ ಹೌಸ್ ಪಕ್ಕದ ನದಿಯಲ್ಲಿ ಸ್ವಚ್ಛತೆ ನಡೆಸಿದರು.

ಕೃಷ್ಣ ಹಿತ್ತಲಮನಿ ನೇತೃತ್ವದಲ್ಲಿ ಹಾಗೂ ಸಮಾಜ ಸೇವಕರಾದ ಆಕಾಶ್ ಹಲಗೆಕರ್ ಅವರ ಬೆಂಬಲದೊಂದಿಗೆ ಈ ಸ್ವಚ್ಛತಾ ಕಾರ್ಯದಲ್ಲಿ ಕಾಶೀನಾಥ ಕೊಪ್ಪದ, ದೇವಿಯಾನಿ ಪಾಟೀಲ, ಪ್ರವೀಣ ದೇವರಮನಿ, ಪ್ರತಾಪ್ ಕಾಂಬಳೆ, ಬಾವಕಣ್ಣ ಪಿರಗನೆ, ಶಂಕರ್ ಕಾಂಬಳೆ, ಗಜಾನನ ಮೇತ್ರಿ, ಶ್ವೇತಾ ಕೋಟಿಯಾನ, ಸಾನಿಕಾ ತೆರಸೆ ಮತ್ತಿತರರು ಉಪಸ್ಥಿತರಿದ್ದರು.

Edited By : Shivu K
PublicNext

PublicNext

19/03/2026 04:11 pm

Cinque Terre

13.24 K

Cinque Terre

0

ಸಂಬಂಧಿತ ಸುದ್ದಿ