ಹಾವೇರಿ : ಉತ್ತರ ಕರ್ನಾಟಕದಲ್ಲಿ ಯುಗಾದಿ ಹಬ್ಬವನ್ನ ವೈಶಿಷ್ಟ್ಯ ಪೂರ್ಣವಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಬಂಡಿಗಳನ್ನ ಗುಡ್ಡ ಹತ್ತಿಸುವುದು ಸಂಪ್ರದಾಯ ಇಲ್ಲಿ ಮನೆ ಮಾಡಿದೆ.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಅರಬಗೊಂಡ ಗ್ರಾಮದಲ್ಲಿ ಸಹ ಈ ಸಂಪ್ರದಾಯ ಆಚರಿಸಿಕೊಂಡು ಬರಲಾಗುತ್ತಿದೆ. ಗ್ರಾಮದ ಬಣಕಾರ್ ಕುಟುಂಬ ಯುಗಾದಿ ಹಬ್ಬದಂದು ಬಂಡಿಯನ್ನ ಬೆಟ್ಟದ ಮೇಲೆ ಹತ್ತಿಸುತ್ತದೆ.
ಈ ಕುಟುಂಬ ಕಳೆದ 20 ವರ್ಷಗಳಿಂದ ಈ ಸಂಪ್ರದಾಯ ಆಚರಿಸಿಕೊಂಡು ಬರುತ್ತಿದೆ. ಗ್ರಾಮದ ಗುಡ್ಡದ ಬಸವಣ್ಣನ ದೇವಸ್ಥಾನಕ್ಕೆ ಬಂಡಿ ಹತ್ತಿಸಲಾಗುತ್ತದೆ. ಈ ರೀತಿ ಮಾಡಿದರೆ ರಾಸುಗಳಿಗೆ ರೋಗರುಜಿನಗಳು ಬರುವುದಿಲ್ಲ ಎಂಬ ನಂಬಿಕೆ ಇಲ್ಲಿದೆ.
Kshetra Samachara
20/03/2026 12:27 pm
LOADING...