ಶಿಗ್ಗಾವಿ : ಗಲ್ಫ್ ರಾಷ್ಟ್ರಗಳ ಯುದ್ಧ ಎಫೆಕ್ಟ್ ನಿಂದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಅಭಾವ ಶಿಗ್ಗಾವಿಯಲ್ಲಿ ಹೆಚ್ಚಳವಾಗಿದೆ.
ಕಮರ್ಷಿಯಲ್ ಗ್ಯಾಸ್ ಸಿಗದೆ ಶಿಗ್ಗಾವಿಯ ಹೋಟೆಲ್ ಮಾಲೀಕರ ಸಂಕಷ್ಟ ಹೇಳತೀರದಾಗಿದೆ. ಶಿಗ್ಗಾವಿಯ ಸರಕಾರಿ ಆಸ್ಪತ್ರೆ ಪಕ್ಕದ ಬೃಂದಾವನ ಹೋಟೆಲ್ ಹಾಗೂ ಇತರೆ ಹೋಟೆಲ್ ಗಳು
ತೀವ್ರ ಕೊರತೆಯನ್ನು ಎದುರಿಸುತ್ತಿವೆ. ಬಹುತೇಕ ಅಡುಗೆಗಳನ್ನು ನಿಲ್ಲಿಸಲಾಗಿದ್ದು, ಹೋಟೆಲ್ ಗಳು ತನ್ನ ಕಳೆ ಕಳೆದುಕೊಂಡಿವೆ.
ವಾಣಿಜ್ಯ ಸಿಲಿಂಡರ್ ಅಲ್ಲದೆ, ಕಟ್ಟಿಗೆಯಿಂದ ಕೆಲವೊಂದಿಷ್ಟು ಆಹಾರ ತಯಾರಿಸಿ ಪೂರೈಸುತ್ತಿವೆ. ಟೀ- ಕಾಫಿಗೆ ಗ್ಯಾಸ್ ಅಷ್ಟೇ ಅನುಕೂಲ ಆಗುತ್ತೆ. ಈಗಿರುವ ಗ್ಯಾಸ್ ಇನ್ನು ಎರಡು ದಿನಗಳಲ್ಲಿ ಖಾಲಿ ಯಾಗುತ್ತದೆ. ಆಮೇಲೆ ಹೋಟೆಲ್ ಮುಚ್ಚುವಂತಹ ಪರಿಸ್ಥಿತಿ ಇದೆ. ಹೋಟೆಲ್ ಬಂದ್ ಮಾಡಿದರೆ ಬಾಡಿಗೆ ಕಟ್ಟಬೇಕು, ಕೆಲಸಗಾರರು ಕೆಲಸ ಬಿಟ್ಟು ಹೋದರೆ ಮರಳಿ ಬರುವುದಿಲ್ಲ, ಸರಕಾರ ನಮ್ಮಂತಹ ಹೋಟೆಲ್ ನವರಿಗೆ ಪರಿಹಾರ ದೊರಕಿಸಿ ಕೊಡಬೇಕು ಎಂದು ಹೋಟೆಲ್ ಮಾಲೀಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ವರದಿ: ರಮೇಶ್ ಸೋಮಕ್ಕನವರ್, ಪಬ್ಲಿಕ್ ನೆಕ್ಸ್ಟ್ ಶಿಗ್ಗಾವಿ
PublicNext
21/03/2026 08:25 pm
LOADING...