ಹಾವೇರಿ: ಹಾವೇರಿಯ ತರಳುಬಾಳು ಬಡಾವಣೆಯಲ್ಲಿ 18ಕ್ಕೂ ಅಧಿಕ ಅಲೆಮಾರಿ ಕುಟುಂಬಗಳು ಗುಡಿಸಲಿನಲ್ಲಿ ವಾಸಿಸುತ್ತಿವೆ. ಯಾರದೋ ನಿವೇಶನದಲ್ಲಿ ಜೋಪಡಿ ಕಟ್ಟಿಕೊಂಡು ಈ ಕುಟುಂಬಗಳು ಜೀವನ ಮಾಡುತ್ತಿವೆ.
ಈ ಕುಟುಂಬಗಳ ಮಕ್ಕಳ ಜ್ಞಾನಾರ್ಜನೆಗಾಗಿ ವಿಭೂತಿ ಶೆಟ್ಟಿಯವರು ಕಸಾಪ ಸಹಕಾರದಿಂದ ಗುಡಿಸಲು ಗ್ರಂಥಾಲಯ ತೆರೆದಿದ್ದಾರೆ.
ಇಲ್ಲಿ ಶಾಲೆಗೆ ಹೋಗುವ ಮಕ್ಕಳು, ಶಾಲೆ ಬಿಟ್ಟ ಮಕ್ಕಳು ಹಾಗೂ ವಯಸ್ಕರು ಆಗಮಿಸಿ ಪುಸ್ತಕ ಓದುತ್ತಾರೆ.
ಈ ಗ್ರಂಥಾಲಯದಲ್ಲಿ ದಿನಪತ್ರಿಕೆ, ವಾರಪತ್ರಿಕೆ ಮತ್ತು ಆಯ್ದ ಕೆಲವೊಂದು ಪುಸ್ತಕಗಳಿವೆ. ಈ ಪುಸ್ತಕ ಮತ್ತು ಪತ್ರಿಕೆಗಳನ್ನು ಅಲೆಮಾರಿ ಮಕ್ಕಳು ಓದುತ್ತಾರೆ. ಕೆಲವರು ಶಾಲೆಗೆ ಹೋಗಿ ಬಂದು ಓದುತ್ತಾರೆ. ಓದಿನ ಹಸಿವು ಇರುವ ಮಕ್ಕಳು ಇಲ್ಲಿ ಬಂದು ದಿನಪತ್ರಿಕೆ, ಪುಸ್ತಕ ಓದುತ್ತಾರೆ.
PublicNext
20/03/2026 12:37 pm
LOADING...