ಹಾವೇರಿ : ಇರಾನ್-ಇಸ್ರೇಲ್ ಅಮೆರಿಕಾ ಯುದ್ಧದ ತೀವ್ರತೆ ಹಿನ್ನೆಲೆ ಹಾವೇರಿಯಲ್ಲಿ ವಾಣಿಜ್ಯ ಸಿಲಿಂಡರ್ ಕೊರತೆ ಕಾಡಲಾರಂಭಿಸಿದೆ. ಕಮರ್ಷಿಯಲ್ ಸಿಲಿಂಡರ್ ಸಿಗದೆ ಹೋಟೆಲ್ ಸಿಬ್ಬಂದಿ ಪರದಾಡುತ್ತಿದ್ದಾರೆ.
ಸಿಲಿಂಡರ್ ಸಿಗದ ಪರಿಣಾಮ ಸೌದೆ ಕಟ್ಟಿಗೆಗೆ
ಭಾರಿ ಬೇಡಿಕೆ ಬಂದಿದೆ. ಹಾವೇರಿಯ ಕಟ್ಟಿಗೆ ಅಡ್ಡೆಗಳಲ್ಲಿ ಸೌದೆ ಮಾರಾಟ ಹೆಚ್ಚಾಗಿದೆ.
ಕಟ್ಟಿಗೆ ಅಡ್ಡೆಗಳಲ್ಲಿ ಸೌದೆ ಮಾರಾಟ ಗಣನೀಯವಾಗಿ ಹೆಚ್ಚಾಗಿದೆ. ಈ ಹಿಂದೆ ಪ್ರತಿದಿನ ಸುಮಾರು 1 ಟನ್ ಸೌದೆ ಮಾರಾಟವಾಗುತ್ತಿದ್ದರೆ, ಈಗ ಅದು ದ್ವಿಗುಣಗೊಂಡು 2 ಟನ್‌ಗಳಿಗೆ ಏರಿಕೆಯಾಗಿದೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಜಾತ್ರೆಗಳಲ್ಲಿ ಅಡುಗೆ ಮಾಡಲು ಸಾಕಷ್ಟು ಕಟ್ಟಿಗೆ ಬೇಕಾಗುತ್ತಿದೆ ಎಂದು ಕಟ್ಟಿಗೆ ಅಡ್ಡೆ ಮಾಲೀಕ ನಜೀರ್ ಮಾಹಿತಿ ನೀಡಿದ್ದಾರೆ. ಮಧ್ಯಪ್ರಾಚ್ಯ ಬಿಕ್ಕಟ್ಟು ಹೀಗೆ ಸ್ಥಳೀಯ ಉದ್ಯಮಗಳ ಮೇಲೆ ನೇರ ಪರಿಣಾಮ ಬೀರಿರುವುದು ಆತಂಕಕ್ಕೆ ಕಾರಣವಾಗಿದೆ.
Kshetra Samachara
19/03/2026 02:37 pm
LOADING...