ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ವಾಣಿಜ್ಯ ಸಿಲಿಂಡರ್ ಕೊರತೆ: ಬೇಕರಿ ಉದ್ಯಮಕ್ಕೆ ಭಾರಿ ಹೊಡೆತ, ಮಾಲೀಕರು ಕಂಗಾಲು!

ಹಾವೇರಿ: ವಾಣಿಜ್ಯ ಸಿಲಿಂಡರ್‌ಗಳ ತೀವ್ರ ಕೊರತೆಯು ಹಾವೇರಿ ಜಿಲ್ಲೆಯ ಬೇಕರಿ ಉದ್ಯಮಕ್ಕೆ ಭಾರಿ ಹೊಡೆತ ನೀಡಿದೆ. ಇದರಿಂದಾಗಿ ಬೇಕರಿಗಳಲ್ಲಿ ತಾಜಾ ಆಹಾರ ಪದಾರ್ಥಗಳ ತಯಾರಿಕೆ ಬಹುತೇಕ ಸ್ಥಗಿತಗೊಂಡಿದ್ದು, ಬೇಕರಿ ಮಾಲೀಕರು ತಮ್ಮ ಬಟ್ಟಿಗಳನ್ನು ಮುಚ್ಚುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಉತ್ಪಾದನೆ ನಿಲುಗಡೆ ಮತ್ತು ಪರ್ಯಾಯ ಮಾರಾಟ

ಈ ಹಿಂದೆ ನಿಯಮಿತವಾಗಿ ತಯಾರಿಸುತ್ತಿದ್ದ ಕೇಕ್, ಎಗ್ ಪಫ್, ಬ್ರೆಡ್, ಸಮೋಸಾ ಸೇರಿದಂತೆ ವಿವಿಧ ಬಿಸಿಬಿಸಿ ತಿನಿಸುಗಳನ್ನು ಬೇಕರಿ ಮಾಲೀಕರು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಇದರ ಬದಲಾಗಿ, ಅವರು ಈಗಾಗಲೇ ತಯಾರಿಸಲಾದ ಸಿಹಿ ತಿಂಡಿಗಳಾದ ಜಿಲೇಬಿ, ಬಾದುಷಾ, ಧಾರವಾಡ ಪೇಡೆ, ಸೋನಪಪ್ಪಡಿ ಮುಂತಾದವುಗಳನ್ನು ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರು ಕೇಳುವ ಪದಾರ್ಥಗಳನ್ನು ಮೊದಲಿನಂತೆ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಕರಿ ಮಾಲೀಕರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಪರ್ಯಾಯ ಮಾರ್ಗಗಳತ್ತ ಬೇಕರಿ ಮಾಲೀಕರು

"ಸಿಲಿಂಡರ್ ಲಭ್ಯವಾಗದೆ ಬೇಕರಿ ನಡೆಸುವುದೇ ಕಷ್ಟವಾಗಿದೆ. ಗ್ರಾಹಕರಿಗೆ ನಿರೀಕ್ಷಿತ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ" ಎಂದು ಬೇಕರಿ ಮಾಲೀಕರಾದ ಪ್ರಶಾಂತ್ ತಮ್ಮ ಅಳಲು ತೋಡಿಕೊಂಡಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು, ಕೆಲವು ಬೇಕರಿ ಮಾಲೀಕರು ಡೀಸೆಲ್ ಒಲೆಗಳನ್ನು ಆರ್ಡರ್ ಮಾಡಿ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ.

Edited By : Manjunath H D
PublicNext

PublicNext

20/03/2026 10:16 pm

Cinque Terre

10.86 K

Cinque Terre

0

ಸಂಬಂಧಿತ ಸುದ್ದಿ