ಹಾವೇರಿ ನಗರದ ಪ್ರಮುಖ ಹೋಟೆಲ್‌ಗಳಲ್ಲಿ ಒಂದಾದ 'ಬ್ರಾಹ್ಮಿ' ಇದೀಗ ವಾಣಿಜ್ಯ ಸಿಲಿಂಡರ್‌ಗಳ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಇದರಿಂದಾಗಿ, ಬಹುತೇಕ ಅಡುಗೆಗಳನ್ನು ನಿಲ್ಲಿಸಲಾಗಿದ್ದು, ಹೋಟೆಲ್ ತನ್ನ ಎಂದಿನ ಕಳೆ ಕಳೆದುಕೊಂಡಿದೆ.
ಅಲ್ಲದೆ ದೋಸೆ, ಪುರಿ, ಇಡ್ಲಿ ವಡಾ ಸೇರಿದಂತೆ ವಿವಿಧ ಉಪಹಾರಗಳ ತಯಾರಿಕೆ ಬಂದ್ ಮಾಡಲಾಗಿದೆ. ಸದಾ ಜನರಿಂದ ಗಿಜಿಗುಡುತ್ತಿದ್ದ ಬ್ರಾಹ್ಮಿ ಹೋಟೆಲ್ ಬೀಕೋ ಎನ್ನುತ್ತಿದೆ.
ವಾಣಿಜ್ಯ ಸಿಲಿಂಡರ್ ಅಲ್ಲದೆ ಕಟ್ಟಿಗೆಯಿಂದ ಕೆಲವೊಂದಿಷ್ಟು ಆಹಾರ ತಯಾರಿಸಿ ಅವುಗಳನ್ನು ಹೋಟೆಲ್ ಸಿಬ್ಬಂದಿ ಪೂರೈಸುತ್ತಿದೆ. ಅಲ್ಲದೆ ಇದ್ದಿಲು ಒಲೆ ಉಪಯೋಗಿಸಿ ಸಹ ಕೆಲ ತಿನಿಸುಗಳ ತಯಾರಿ ನಡೆದಿದೆ.
PublicNext
16/03/2026 09:56 pm
LOADING...