ನವದೆಹಲಿ: ಇರಾನ್ ಯುದ್ಧದ ಬಿಸಿ ವಾಹನ ಸವಾರರಿಗೆ ತಟ್ಟಿದ್ದು, ತೈಲ ಕಂಪನಿಗಳು ಪ್ರೀಮಿಯಂ ಪೆಟ್ರೋಲ್ ದರವನ್ನು ಲೀಟರ್‌ಗೆ 2 ರೂ. ಏರಿಕೆ ಮಾಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಭಾರೀ ಏರಿಕೆ ಕಂಡಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಈ ನಿರ್ಧಾರದಿಂದ ಸಾಮಾನ್ಯ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೇವಲ ಪ್ರೀಮಿಯಂ ಪೆಟ್ರೋಲ್ ದರ ಮಾತ್ರ ಹೆಚ್ಚಳವಾಗಿದೆ.
ಪ್ರೀಮಿಯಂ ಪೆಟ್ರೋಲ್ ಹೆಚ್ಚಿನ ಆಕ್ಟೇನ್ ರೇಟಿಂಗ್ ಹೊಂದಿರುವುದರಿಂದ ಸಾಮಾನ್ಯ ಪೆಟ್ರೋಲ್‌ಗಿಂತ ಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ಪೆಟ್ರೋಲ್ 91 ಆಕ್ಟೇನ್ ರೇಟಿಂಗ್ ಹೊಂದಿದ್ದರೆ, ಪ್ರೀಮಿಯಂ ಅಥವಾ ಪವರ್ ಪೆಟ್ರೋಲ್ ಸಾಮಾನ್ಯವಾಗಿ 93 ರಿಂದ 97 ಆಕ್ಟೇನ್ ರೇಟಿಂಗ್ ಹೊಂದಿರುತ್ತದೆ. ಇದೇ ಕಾರಣಕ್ಕೆ ಇದರ ಬೆಲೆ ಸಾಮಾನ್ಯ ಪೆಟ್ರೋಲ್‌ಗಿಂತ ಹೆಚ್ಚಾಗಿರುತ್ತದೆ.
PublicNext
20/03/2026 04:46 pm
LOADING...