ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾರ್ಮುಜ್ ಉದ್ವಿಗ್ನತೆ: ಗಲ್ಫ್ ರಾಷ್ಟ್ರಗಳಿಗೆ ಪ್ರತಿದಿನ 21,600 ಕೋಟಿ ರೂ. ನಷ್ಟ!

ಹಾರ್ಮುಜ್ ಜಲಸಂಧಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಅದರಿಂದ ಜಾಗತಿಕ ಇಂಧನ ಹರಿವಿಗೆ ಅಡ್ಡಿಯಾಗುವ ಸಂಭಾವ್ಯ ಮುಚ್ಚುವಿಕೆಯ ಭೀತಿಯು ಗಲ್ಫ್ ರಾಷ್ಟ್ರಗಳಿಗೆ ಭಾರಿ ಆರ್ಥಿಕ ನಷ್ಟವನ್ನು ಉಂಟುಮಾಡುತ್ತಿದೆ ಎಂದು ವರದಿಯಾಗಿದೆ.

ಈ ರಾಷ್ಟ್ರಗಳು ದಿನಕ್ಕೆ ಸುಮಾರು 2.3 ಬಿಲಿಯನ್ ಡಾಲರ್‌ (ಸುಮಾರು 21,600 ಕೋಟಿ ರೂಪಾಯಿಗೂ ಹೆಚ್ಚು) ನಷ್ಟ ಅನುಭವಿಸುತ್ತಿವೆ ಎಂದು ಅಂದಾಜಿಸಲಾಗಿದೆ. ಈ ಪರಿಸ್ಥಿತಿಯಿಂದ ಸೌದಿ ಅರೇಬಿಯಾ ಅತಿ ಹೆಚ್ಚು ಹಾನಿಗೊಳಗಾದ ದೇಶಗಳಲ್ಲಿ ಒಂದಾಗಿದ್ದು, ಪ್ರತಿದಿನ 1 ಬಿಲಿಯನ್ ಡಾಲರ್‌ (ಸುಮಾರು9,400 ಕೋಟಿ ರೂಪಾಯಿ) ನಷ್ಟ ಅನುಭವಿಸುತ್ತಿದೆ. ಇದಲ್ಲದೆ, ಯುಎಇ ಪ್ರತಿದಿನ ಸುಮಾರು 350 ಮಿಲಿಯನ್ ಡಾಲರ್‌ (ಸುಮಾರು 3,290 ಕೋಟಿ ರೂಪಾಯಿ) ನಷ್ಟ ಅನುಭವಿಸುತ್ತಿದೆ ಎಂದು ಅಂದಾಜಿಸಲಾಗಿದೆ.

Edited By : Vijay Kumar
PublicNext

PublicNext

21/03/2026 08:30 pm

Cinque Terre

17.87 K

Cinque Terre

1

ಸಂಬಂಧಿತ ಸುದ್ದಿ