ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ: ಮೋದಿ-ಇರಾನ್ ಅಧ್ಯಕ್ಷರ ತುರ್ತು ಮಾತುಕತೆ.!

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಭೀಕರ ಸಮರ 22ನೇ ದಿನಕ್ಕೆ ಕಾಲಿಟ್ಟು ಮತ್ತಷ್ಟು ಉಗ್ರ ಸ್ವರೂಪ ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಡಾ. ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ದೂರವಾಣಿ ಮೂಲಕ ಮಹತ್ವದ ಮಾತುಕತೆ ನಡೆಸಿದ್ದು, ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.

ಮಾತುಕತೆಯ ಆರಂಭದಲ್ಲಿ ಮೋದಿ ಅವರು ಈದ್ ಉಲ್-ಫಿತ್ರ್ ಮತ್ತು ನೌರುಜ್ ಹಬ್ಬಗಳ ಶುಭಾಶಯಗಳನ್ನು ತಿಳಿಸಿ, ಪಶ್ಚಿಮ ಏಷ್ಯಾದಲ್ಲಿ ಶಾಂತಿ ನೆಲೆಸಲಿ ಎಂಬ ಆಶಯ ವ್ಯಕ್ತಪಡಿಸಿದರು. ಆದರೆ ಹಬ್ಬದ ಸಂಭ್ರಮದ ನಡುವೆ, ಪ್ರಾದೇಶಿಕ ಉದ್ವಿಗ್ನತೆ, ನಿರಂತರ ದಾಳಿಗಳು ಮತ್ತು ಅಶಾಂತಿಯ ಕುರಿತು ಗಂಭೀರ ಚರ್ಚೆ ನಡೆಯಿತು.

ಮೂಲಸೌಕರ್ಯಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ಮೋದಿ ಕಟುವಾಗಿ ಖಂಡಿಸಿದರು. ಇಂತಹ ದಾಳಿಗಳು ಕೇವಲ ಒಂದು ಪ್ರದೇಶಕ್ಕಷ್ಟೇ ಸೀಮಿತವಾಗದೇ, ಜಾಗತಿಕ ಪೂರೈಕೆ ಸರಪಳಿಗಳ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಎಚ್ಚರಿಸಿದರು. ಇದರಿಂದ ವಿಶ್ವ ಆರ್ಥಿಕತೆಯಲ್ಲೂ ಅಸ್ಥಿರತೆ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ನೌಕಾಯಾನ ಸ್ವಾತಂತ್ರ್ಯ ಅತ್ಯಂತ ಪ್ರಮುಖ ವಿಷಯವಾಗಿದ್ದು, ಅಂತರರಾಷ್ಟ್ರೀಯ ಸಮುದ್ರ ಮಾರ್ಗಗಳು ಸುರಕ್ಷಿತವಾಗಿರಬೇಕು ಎಂದು ಮೋದಿ ಒತ್ತಿ ಹೇಳಿದರು. ಇನ್ನು ಇರಾನ್‌ನಲ್ಲಿ ಇರುವ ಭಾರತೀಯರ ಭದ್ರತೆಗೆ ನೀಡುತ್ತಿರುವ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಈ ಮಾತುಕತೆ ಯುದ್ಧದ ನಡುವೆ ಶಾಂತಿ ಪ್ರಯತ್ನಗಳ ಸಂಕೇತವಾಗಿ ಪರಿಣಮಿಸಿದೆ.

Edited By :
PublicNext

PublicNext

21/03/2026 05:33 pm

Cinque Terre

11.33 K

Cinque Terre

0

ಸಂಬಂಧಿತ ಸುದ್ದಿ