ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ಅನುಭವ ಪರಂಪರೆಗೆ ಹೊಸ ಮೌಲ್ಯ ಕೊಟ್ಟ ಅಲ್ಲಮಪ್ರಭುಗಳು - ಬಸವ ಮರುಳಸಿದ್ಧ ಸ್ವಾಮೀಜಿ

ಶಿವಮೊಗ್ಗ : ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ, ಪ್ರಜಾಪ್ರಭುತ್ವದ ಪ್ರಥಮ ಮಾದರಿ ಎನಿಸಿದ ಅನುಭವ ಮಂಟಪದ ಪ್ರಥಮ ಅಧ್ಯಕ್ಷರಾದ ಅಲ್ಲಮಪ್ರಭುದೇವರು ಕನ್ನಡದ ಅನುಭಾವ ಪರಂಪರೆಗೆ ಹೊಸ ಮೌಲ್ಯಗಳನ್ನು ಕೊಟ್ಟವರು ಎಂದು ಬಸವಕೇಂದ್ರದ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದ್ದಾರೆ.

ಬಸವಪರ ಸಂಘಟನೆಗಳು ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಹಮ್ಮಿಕೊಂಡಿದ್ದ ಅಲ್ಲಮಪ್ರಭುದೇವರ ಜಯಂತಿ ಸಾನ್ನಿಧ್ಯವಹಿಸಿ ಅವರು ಅಶೀರ್ವಚನ ನೀಡಿದರು. ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ, ಶೂನ್ಯಸಿಂಹಾಸನದ ಪ್ರಥಮ ಅಧ್ಯಕ್ಷರಾದ ಅಲ್ಲಮ ಪ್ರಭುಗಳು, ದೇಶ ಸಂಚಾರ ಮಾಡಿ ಸಾಮಾನ್ಯನಿಂದ ಸಾಧಕನವರೆಗೂ- ಎಲ್ಲರ ಸಾಧನೆಯ ಓರೆಕೋರೆಗಳನ್ನು ತಿದ್ದಿ ಸರಿದಾರಿಗೆ ಕಳಿಸಿದ ಮಹಾನುಭಾವಿ ಎಂದರು.

ಕನ್ನಡ ಸಾಹಿತ್ಯಕ್ಕೆ ಮೌಲಿಕ ಕೊಡುಗೆ ನೀಡಿದ ಅಲ್ಲಮಪ್ರಭುಗಳ ವಚನಗಳ ಮೌಲ್ಯಗಳು ನಮಗೆಲ್ಲ ಪ್ರೇರಣೆಯಾಗಿವೆ ಎಂದರು.

Edited By : PublicNext Desk
Kshetra Samachara

Kshetra Samachara

20/03/2026 06:43 pm

Cinque Terre

260

Cinque Terre

0

ಸಂಬಂಧಿತ ಸುದ್ದಿ