ಹೊಸನಗರ : ಇಲ್ಲಿನ ಕೊಡೂರು ವಲಯದ ಮಾವಿನ ಕಟ್ಟೆ ಕಾರ್ಯಕ್ಷೇತ್ರದ ಶಿವಾನಿ ಜ್ಞಾನ ವಿಕಾಸ ಕೇಂದ್ರದಲ್ಲಿ ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ನಡೆದ 3 ತಿಂಗಳ ಚಂಡೆ ತರಗತಿ ಸಮಾರೋಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಯೋಜನಾಧಿಕಾರಿ ಪ್ರದೀಪ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಚಂಡೆ ತರಗತಿಯನ್ನು ಯಶಸ್ವಿಯಾಗಿ ಕಲಿತು ಉತ್ತಮವಾಗಿ ಪ್ರದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.
ಮುಭಾರು ಒಕ್ಕೂಟದ ಅಧ್ಯಕ್ಷ ಹರೀಶ್ ಮಾತನಾಡಿ, ನಮ್ಮ ಊರಿನಲ್ಲಿ ಚಂಡೆ ತರಗತಿ ನಡೆಯಲಿದ್ದು, ಆಸಕ್ತರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ಪಂಚಾಯತ್‌ನ ಮಾಜಿ ಅಧ್ಯಕ್ಷೆ ಮಾಲತಿ, ಚಂಡೆ ತರಬೇತುದಾರ ಶ್ರೀನಿವಾಸ್ ಆಚಾರ್ಯ ಹಾಗೂ ಕೋಡೂರು ವಲಯದ ಮೇಲ್ವಿಚಾರಕ ಉಮಾ, ಸೇವಾ ಪ್ರತಿನಿಧಿ ರೇಖಾ ಮತ್ತಿತರರು ಉಪಸ್ಥಿತರಿದ್ದರು.
ಸಭೆಯ ಅಧ್ಯಕ್ಷತೆ ವಹಿಸಿದ ಕೇಂದ್ರದ ಸದಸ್ಯ ವಸಂತ ಮಾತನಾಡಿ, ಹೇಮಾವತಿ ವಿ.ಹೆಗ್ಗಡೆಯವರು ನಾಲ್ಕು ಗೋಡೆಗಳ ಮಧ್ಯೆ ಇರುವ ಮಹಿಳೆಯರಿಗೆ ಮಹಿಳಾ ಜ್ಞಾನವಿಕಾಸ ಕೇಂದ್ರವನ್ನು ಮಾಡಿಕೊಟ್ಟಿದ್ದಾರೆ. ಅದರ ಮೂಲಕ ಉತ್ತಮ ಕಾರ್ಯಗಳನ್ನು ಆಯೋಜಿಸುತ್ತಿರುತ್ತಾರೆ. ಅವರಿಗೆ ವಂದನೆ ಎಂದರು.
ಕೇಂದ್ರದ ಸದಸ್ಯೆ ಶಾರದ ನಿರೂಪಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶಾಂತಕುಮಾರಿ ಸ್ವಾಗತಿಸಿದರು. ರಜಿನಿ ಪ್ರಾರ್ಥಿಸಿದರು.
PublicNext
21/03/2026 12:58 pm
LOADING...