ಹಿರಿಯೂರು : ನಗರದ ವೇದಾವತಿ ನದಿ ದಡದ ಪಕ್ಕದಲ್ಲಿರುವ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ಗಾಂಜಾವನ್ನು ಖಚಿತ ಮಾಹಿತಿಯ ಆಧಾರದ ಮೇಲೆ ಮನೆ ಮೇಲೆ ಹಿರಿಯೂರು ಪೊಲೀಸರು ದಾಳಿ ನಡೆಸಿ, ಸಂಗ್ರಹಿಸಿಡಲಾಗಿದ್ದ ಗಾಂಜಾವನ್ನು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.
ಗುಜರಿ ವ್ಯಾಪಾರ ಮಾಡುವ ಸಚಿನ್ ಬಂಧಿತ ಆರೋಪಿಯಾಗಿದ್ದು, ಈತ ನದಿ ದಡದ ಸಮೀಪ ಗಾಂಜಾ ಬೆಳೆದು ಮನೆಯಲ್ಲಿ ಸಂಗ್ರಹಿಸಿ ಇಟ್ಟಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಡಿವೈಎಸ್.ಪಿ. ಟಿ.ಎಂ.ಶಿವಕುಮಾರ್ ಹಾಗೂ ನಗರ ಠಾಣೆ ಇನ್ಸ್ ಪೆಕ್ಟರ್ ಮಹಮ್ಮದ್ ಸಿರಾಜ್ ಅವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಶಶಿಕಲಾ ಹಾಗೂ ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ.
ದಾಳಿ ನಡೆಸಿದ ಸಂದರ್ಭದಲ್ಲಿ 1.20 ಲಕ್ಷ ರೂ ಮೌಲ್ಯದ 2470 ಗ್ರಾಂ ತೂಕದ 60 ಸಾವಿರ ರೂ ಬೆಲೆ ಬಾಳುವ ಗಾಂಜಾ ಗಿಡದ ಕಾಂಡ ಮತ್ತು ಬೇರುಗಳು ಪತ್ತೆಯಾಗಿದ್ದು, ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ..
PublicNext
21/03/2026 06:58 pm
LOADING...