ಮೊಳಕಾಲ್ಮೂರು: ತ್ಯಾಗ, ಬಲಿದಾನದ ಪ್ರತೀಕವಾಗಿರುವ ರಂಜಾನ್ ಹಬ್ಬದ ಸಂಭ್ರಮ ಮನೆ ಮಾಡಿದೆ. ಮಸೀದಿಗಳ ಆವರಣದಲ್ಲಿ ಇಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಮುಸ್ಲಿಂ ಭಾಂದವರು ಪರಸ್ಪರ ಆಲಂಗಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.
ರಂಜಾನ್ ಮಾಸದ ಉಪವಾಸವನ್ನು ಅಂತ್ಯಗೊಳಿಸಿರುವ ಮುಸ್ಲಿಮರು ಮಸೀದಿಗಳಲ್ಲೂ ಪ್ರಾರ್ಥನೆ ಸಲ್ಲಿಸಿದರು.ಒಂದು ತಿಂಗಳು ಕಠಿಣ ಉಪವಾಸ ಮಾಡಿದ್ದ ಮುಸ್ಲಿಮರಿಗೆ ಶುಕ್ರವಾರ ಸಂಜೆ ಚಂದ್ರ ದರ್ಶನವಾಗಿತ್ತು. ಈ ಹಿನ್ನೆಲೆಯಲ್ಲಿ ಹಬ್ಬದ ಆಚರಣೆಗೆ ಮುಂದಾದರು. ಹೊಸ ಉಡುಪು, ಬಗೆಬಗೆಯ ಟೋಪಿಗಳನ್ನು ಧರಿಸಿ ಬಂದಿದ್ದ ಚಿಣ್ಣರು ನೋಡುಗರ ಗಮನ ಸೆಳೆದರು.ಸುಗಂಧ ದ್ರವ್ಯದ ಘಮಲು ಎಲ್ಲೆಡೆ ಹರಡಿತ್ತು. ಮುಸ್ಲಿಂ ಬಡಾವಣೆಗಳಲ್ಲಿ ಹಬ್ಬದ ಸಂಭ್ರಮ ಜೋರಾಗಿಯೇ ಇತ್ತು.
ರಾಂಪುರ ಗ್ರಾಮದ ಈದ್ಗಾ ಮೈದಾನದಲ್ಲಿ ನಡೆದ ಪ್ರಾರ್ಥನೆಯಲ್ಲಿ ಶಾಸಕ ಎನ್ ವೈ ಗೋಪಾಲಕೃಷ್ಣ ಭಾಗಿಯಾದರು. ಬಿಜಿಕೆರೆ ಗ್ರಾಮದಲ್ಲಿ ರಂಜಾನ್ ಹಬ್ಬದ ಪ್ರಾರ್ಥನೆ ವೇಳೆ ದ್ರಾಕ್ಷರಸ ಮತ್ತು ವೈನ್ ಬೋರ್ಡ್ ನಿಗಮ ಮಂಡಳಿ ಅಧ್ಯಕ್ಷರಾದ ಡಾ. ಬಿ ಯೋಗೇಶ್ ಬಾಬು ಸೇರಿದಂತೆ ಹಲವರು ಭಾಗಿಯಾಗಿ ಮುಸಲ್ಮಾನ ಬಾಂಧವರಿಗೆ ಶುಭಾಶಯ ಕೋರಿದರು.
PublicNext
21/03/2026 04:33 pm
LOADING...