ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮೂರು : ಯುಗಾದಿ ಪ್ರಯುಕ್ತವಾಗಿ ಕೋನಾಪುರ ಗ್ರಾಮದಲ್ಲಿ ಸಾಂಪ್ರದಾಯಿಕ ಕಸರತ್ತಿನ ಸ್ಪರ್ಧೆಗಳು

ಮೊಳಕಾಲ್ಮೂರು : ಹಳ್ಳಿಗಳಲ್ಲಿ ಯುಗಾದಿ ಹಬ್ಬವೆಂದರೆ ಮನೆ-ಮನಗಳಲ್ಲಿ ಹೊಸ ಚೈತನ್ಯ ತುಂಬಿ ಸಂಭ್ರಮ ಮೂಡಿಸುವ ಸಾಂಪ್ರದಾಯಿಕ ಹಬ್ಬ.

ಮೊಳಕಾಲ್ಮೂರು ತಾಲೂಕಿನ ಕೋನಪುರ ಗ್ರಾಮದಲ್ಲಿ ಯುಗಾದಿ ಹಬ್ಬ ಕಳೆಗಟ್ಟಿದೆ, ಯುಗಾದಿ ಹಬ್ಬದಲ್ಲಿ ಸಾಂಪ್ರದಾಯಿಕ ಆಟಗಳಲ್ಲಿ ತೊಡಗಿ ಕಸರತ್ತು ಪ್ರದರ್ಶಿಸುವ ಯುವಕರನ್ನು ನೋಡುವುದೇ ಒಂದು ಮೋಜು..

120 ಕೆಜಿ ತೂಕವಿರುವ ಮರಳಿನ ಚೀಲವನ್ನು ಎತ್ತುವ ಸ್ಪರ್ಧೆ ಹಾಗೂ ಒಂದು ಕ್ವಿಂಟಲ್ ತೂಕದ ಗಡಾರಿ ಎತ್ತುವ ಸ್ಪರ್ಧೆಯಲ್ಲಿ ಪಾಲ್ಗೊಂಡ ಯುವಕರು ಶಕ್ತಿಮೀರಿ ಗಡಾರಿ ಮತ್ತು ಮರಳಿನ ಚೀಲವನ್ನು ಎತ್ತಿ ತಮ್ಮ ತಾಕತ್ತನ್ನು ಪ್ರದರ್ಶಿಸಿದರು.

ಈ ಸ್ಪರ್ಧೆಗೆ ಸುತ್ತಮುತ್ತಲಿನ ನಾನಾ ಹಳ್ಳಿಗಳು ಸೇರಿದಂತೆ ನೆರೆಯ ಆಂಧ್ರದಿಂದಲೂ ಸ್ಪರ್ಧಿಗಳು ಆಗಮಿಸಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಹುಮಾನ ಪಡೆದುಕೊಳ್ಳುತ್ತಾರೆ, ಸ್ಪರ್ಧೆಯ ನಂತರ ಮನೋರಂಜನೆಗಾಗಿ ಊರಿನ ಎಲ್ಲಾ ಯುವಕರು ಸೇರಿ ಕೋಲಾಟ ಆಡುತ್ತಾ ಯುಗಾದಿ ಹಬ್ಬವನ್ನು ಸಂಭ್ರಮಿಸಿದರು.

Edited By : PublicNext Desk
Kshetra Samachara

Kshetra Samachara

20/03/2026 05:39 pm

Cinque Terre

1.32 K

Cinque Terre

0

ಸಂಬಂಧಿತ ಸುದ್ದಿ