ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಗೆಳತಿ ಕೌಟುಂಬಿಕ ಸಲಹಾ ಸಮಿತಿಯ ತ್ರೈಮಾಸಿಕ ಸಭೆ

ಚಿತ್ರದುರ್ಗ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಪ್ರಾದೇಶಿಕ ವ್ಯಾಪ್ತಿಯ ಗೆಳತಿ ಕೌಟುಂಬಿಕ ಸಲಹಾ ಸಮಿತಿಯ ತ್ರೈಮಾಸಿಕ ಸಭೆ ಮಾ.13ರಂದು ಚಿತ್ರದುರ್ಗದಲ್ಲಿ ನಡೆಯಿತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ವಿಜಯಕುಮಾರ್ ಹೆಚ್ ಸಭೆಯನ್ನು ಉದ್ಘಾಟಿಸಿದರು. ಮನೋರೋಗ ತಜ್ಞರು ಬಸವರಾಜ್, ಸ್ತ್ರೀ ರೋಗ ತಜ್ಞೆ ಡಾ.ಜ್ಯೋತಿ , ನ್ಯಾಯವಾದಿ ಗೀತಾಂಜಲಿ, ಮಕ್ಕಳ ಕಲ್ಯಾಣ ಇಲಾಖೆ ಯೋಜನಾಧಿಕಾರಿ ಮಂಜುನಾಥ್ ವಿ, ಶೃತಿ ನಾಗಭೂಷಣ್ ಆದರ್ಶ ಕುಟುಂಬ ಮಹಿಳೆ, ಪ್ರಾದೇಶಿಕ ಕಚೇರಿಯ ಜ್ಞಾನ ವಿಕಾಸ ವಿಭಾಗದ ಯೋಜನಾಧಿಕಾರಿ ರತ್ನ ಆರ್ ಟಿ, ಕೇಂದ್ರ ಕಚೇರಿಯ ಗೆಳತಿ ಆಪ್ತ ಸಮಾಲೋಚಕಿ ಸುಮಿತ್ರಾ ಜೈನ್, ಜಿಲ್ಲಾ ಸಮನ್ವಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಾದೇಶಿಕ ಜ್ಞಾನವಿಕಾಸ ಯೋಜನಾಧಿಕಾರಿ ರತ್ನ ಆರ್ ಟಿ ಹಿಂದಿನ ಸಭೆಯ ವರದಿ ಮಂಡನೆ ಮಾಡಿದರು.

ಬಳಿಕ ಮಾತನಾಡಿದ ಅವರು, ಮಹಿಳಾ ಸಬಲೀಕರಣಕ್ಕೆ ಹೇಮಾವತಿ ವಿ ಹೆಗ್ಗಡೆಯವರು ಹಲವಾರು ಉತ್ತಮ ಕಾರ್ಯಕ್ರಮಗಳನ್ನು ಗ್ರಾಮೀಣ ಅನುಷ್ಠಾನ ಮಾಡುತ್ತಿದ್ದಾರೆ. ಇದೀಗ ಮಾನಸಿಕವಾಗಿ ತತ್ತರಿಸಿದ ತಾಯಂದಿರಿಗೆ ಗೆಳತಿ ಒಂದು ಸಾಂತ್ವನ ಕೇಂದ್ರದಂತೆ ಸಮಗ್ರವಾಗಿ ಸರಕಾರದೊಂದಿಗೆ ಒಂದು ಕೊಂಡಿಯಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಪ್ರಾದೇಶಿಕ ವ್ಯಾಪ್ತಿಯಲ್ಲಿ ಗೆಳತಿ ಕಾರ್ಯಕ್ರಮದ ಬಗ್ಗೆ ಹಾಗೂ ಅನುಷ್ಠಾನದ ಅಂಕಿ ಅಂಶಗಳ ಜೊತೆಗೆ ಕೆಲವೊಂದು ಘಟನೆಗಳ ಬಗ್ಗೆ ಪ್ರಾದೇಶಿಕ ವ್ಯಾಪ್ತಿಯಿಂದ ಕಾರ್ಯಕರ್ತರ ಪಡೆ ಭೇಟಿ ಮಾಡಿ ಅಲ್ಲಿ ಕಣ್ಣಿಗೆ ಕಟ್ಟಿರುವ ನಿದರ್ಶನಗಳ ಬಗ್ಗೆ ಈ ಸಮಿತಿಯಲ್ಲಿ ಮೆಲುಕು ಹಾಕಲಾಯಿತು. ಇದರಿಂದ ಗೆಳತಿ ಕಾರ್ಯಕ್ರಮದ ಅನುಷ್ಠಾನ ಪ್ರಾದೇಶಿಕ ಮಟ್ಟದಲ್ಲಿ ಮಾನ್ಯ ಪ್ರಾದೇಶಿಕ ನಿರ್ದೇಶಕರ ಮಾರ್ಗದರ್ಶನದಂತೆ ಉತ್ತಮವಾಗಿ ಆಗಿರುವುದು ಕೂಡ ಈ ಸಂದರ್ಭದಲ್ಲಿ ಸಮಿತಿಯವರು ಸರಕಾರ ಮಾಡಬೇಕಾದ ಕೆಲಸವನ್ನು ತಾವೆಲ್ಲರೂ ಮಾಡಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆಪ್ತಸಮಾಲೋಚಕಿ ಸುಮಿತ್ರ ಜೈನ್ ಮಾತನಾಡಿ, ರಾಜ್ಯವ್ಯಾಪ್ತಿಯ ಅಂಕಿ ಅಂಶ ಸಲಹಾ ಸಮಿತಿ ಕಾರ್ಯಗಳ ಬಗ್ಗೆ ಹಾಗೂ ಗೆಳತಿ ಕಾರ್ಯಕ್ರಮದ ಅನುಷ್ಠಾನ ಮತ್ತು ದಾಖಲೀಕರಣಗಳ ಬಗ್ಗೆ ತಿಳಿಸಿದರು.

Edited By : Vijay Kumar
Kshetra Samachara

Kshetra Samachara

14/03/2026 10:03 pm

Cinque Terre

10.92 K

Cinque Terre

0

ಸಂಬಂಧಿತ ಸುದ್ದಿ