ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಳುನಾಡಿನ ಆತ್ಮಕ್ಕೆ ಹೊಸ ಚೈತನ್ಯ: 'ಅಪ್ಪೆ ಬೇರ್ ದ ತುಳುನಾಡ್' ವಿಚಾರಗೋಷ್ಠಿ!

ಮುಲ್ಕಿ: ತುಳುನಾಡಿನ ನಾಗರಿಕತೆಯ ವೈಭವವನ್ನು ಪ್ರತಿಬಿಂಬಿಸುವ “ಅಪ್ಪೆ ಬೇರ್ ದ ತುಳುನಾಡ್” ರಾಷ್ಟ್ರೀಯ ತುಳು ವಿಚಾರಗೋಷ್ಠಿಯನ್ನು ಮೇ 24ರಂದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಸಭಾಭವನದಲ್ಲಿ ನಡೆಯಲಿದೆ ಎಂದು ಮುಲ್ಕಿ ತುಳುವ ಮಹಾಸಭೆ ಇಂಟರ್ನ್ಯಾಷನಲ್ ನ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಹೇಳಿದರು

ಅವರು ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ನಡೆದ ಮುಲ್ಕಿ ತುಳುವ ಮಹಾಸಭೆ ಇಂಟರ್ನ್ಯಾಷನಲ್

ಸ್ವಾಗತ ಸಮಿತಿ ಸಭೆಯಲ್ಲಿ ಮಾತನಾಡಿ ಕಾರ್ಯಕ್ರಮವನ್ನು ಮುಲ್ಕಿ ತುಳುವ ಮಹಾಸಭೆ ಇಂಟರ್ನ್ಯಾಷನಲ್ ಆಯೋಜಿಸುತ್ತಿದ್ದು, ಮುಲ್ಕಿ ಬಂಟರ ಸಂಘ, ಬಿಲ್ಲವ ಸಂಘ-ಮಹಿಳಾ ಮಂಡಳಿ, ಲಯನ್ಸ್ ಕ್ಲಬ್ ಮುಲ್ಕಿ, ರೋಟರಿ ಇಂಟರ್ನ್ಯಾಷನಲ್ ರವರು ಸಹಯೋಗ ನೀಡುತ್ತಿದ್ದು, ತುಳು ಅಭಿಮಾನಿಗಳು, ಸಂಘಟನೆಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಹಕರಿಸಿ ಯಶಸ್ವಿಗೊಳಿಸಲು ವಿನಂತಿಸಿದರು

ಕಾರ್ಯಕ್ರಮಗಳ ರೂಪರೇಷೆಯ ಬಗ್ಗೆ ತುಳುವರ್ಲ್ಡ್ ಫೌಂಡೇಶನ್, ನಿರ್ದೇಶಕರಾದ

ಡಾ. ರಾಜೇಶ್ ಆಳ್ವ ಮಂಗಳೂರಿನ ತುಳುವ ಮಹಾಸಭೆಯ ಪ್ರಧಾನ ಸಂಚಾಲಕ ಅರವಿಂದ ಬೆಳ್ಚಡ ಮತ್ತು ತುಳುವರ್ಲ್ಡ್ ಫೌಂಡೇಶನ್ ನ ಕಾರ್ಯದರ್ಶಿ

ಹರಿಪ್ರಸಾದ್ ರೈ ಜಿಕೆ ಉಪಸ್ಥಿತರಿದ್ದು, ಕಾರ್ಯಕ್ರಮದ ಸಂಘಟನೆ, ವ್ಯಾಪ್ತಿ ಮತ್ತು ಯಶಸ್ಸಿಗೆ ಸಂಬಂಧಿಸಿದಂತೆ ಸೂಕ್ತ ಮಾರ್ಗದರ್ಶನ ನೀಡಿದರು.

ಸಭೆಯಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗಾಗಿ ಸೂಕ್ತ ಸಲಹೆಗಳನ್ನು ನೀಡಿದರು.

ತಾಯಿ ಮೂಲ ಸಂಸ್ಕೃತಿಯ ತುಳುನಾಡಿನ ಆಚಾರ–ವಿಚಾರಗಳನ್ನು ಉಳಿಸಿ ಬೆಳೆಸುವುದು ಇಂದಿನ ಕಾಲಘಟ್ಟದಲ್ಲಿ ಅತ್ಯಂತ ಅನಿವಾರ್ಯವಾಗಿದೆ. ಇಂತಹ ಅದ್ಭುತ ಪೂರ್ವಜರ ಪರಂಪರೆಯನ್ನು ಸಂರಕ್ಷಿಸಿ ಸುಸ್ಥಿತಿಯಲ್ಲಿ ಉಳಿಸುವುದು ನಮ್ಮ ಪ್ರತಿಯೊಬ್ಬರ ಪವಿತ್ರ ಕರ್ತವ್ಯವಾಗಿದೆ.

ಇತ್ತೀಚಿನ ದಿನಗಳಲ್ಲಿ ಪರಸ್ಪರ ನಂಬಿಕೆಗಳು ಕುಂದುತ್ತಿದ್ದು, ದೈವ ನಂಬಿಕೆಯೂ ನಿಧಾನವಾಗಿ ಕಡಿಮೆಯಾಗುತ್ತಿರುವ ಸಂದರ್ಭದಲ್ಲೇ, ಈ ರೀತಿಯ ಸಾಂಸ್ಕೃತಿಕ ಹಾಗೂ ಆತ್ಮೀಯ ಕಾರ್ಯಕ್ರಮಗಳು ಸಮಾಜದಲ್ಲಿ ಹೊಸ ಚೈತನ್ಯವನ್ನು ಮೂಡಿಸಬಲ್ಲವು.

“ಅಪ್ಪೆ ಬೇರ್ ದ ತುಳುನಾಡ್” ಕಾರ್ಯಕ್ರಮವು ತುಳು ನಾಡಿನ ಸಂಸ್ಕೃತಿ, ಪರಂಪರೆ ಮತ್ತು ದೈವ ಭಕ್ತಿಯನ್ನು ಪುನರುಜ್ಜೀವನಗೊಳಿಸುವ ದಿಕ್ಕಿನಲ್ಲಿ ಮಹತ್ವದ ಸಂಚಲನವನ್ನು ಸೃಷ್ಟಿಸಲಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.

ಸಭೆಯಲ್ಲಿ ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ, ಸರೋಜಿನಿ ಸುವರ್ಣ ಪ್ರಧಾನ ಸಂಚಾಲಕ ಸುನಿಲ್ ಆಳ್ವ, ಪ್ರಧಾನ ಕಾರ್ಯದರ್ಶಿ ಗೀತಾ ಗಣೇಶ್ ಯಾಗಿ, ಕಾರ್ಯದರ್ಶಿ ಅಮೂಲ್ಯ ಕಟೀಲ್, ಖಜಾಂಚಿ ಲತಾ ಶೇಖರ್ ಮತ್ತು ಸದಸ್ಯರಾದ ಪ್ರಶಾಂತ್ ಶೆಟ್ಟಿ, ಶಶಿಕಲಾ ಯದೀಶ್ ಅಮೀನ್, ರವೀಶ್ ಕಾಮತ್, ದಿನೇಶ್ ಕೊಲ್ನಾಡು, ಪಟ್ಲ ಫೌಂಡೇಶನ್ ಸಂಚಾಲಕಿ ಚಂದ್ರಕಲಾ ಉತ್ತಮ್ ಸಿಂಗ್ ಸಭೆಯಲ್ಲಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

21/03/2026 10:11 pm

Cinque Terre

256

Cinque Terre

0

ಸಂಬಂಧಿತ ಸುದ್ದಿ