ಬ್ರಹ್ಮಾವರ: ನಾಡಿನಾದ್ಯಂತ ಮುಸ್ಲಿಂ ಬಾಂಧವರಿಂದ ನಡೆದ ರಂಜಾನ್ ಮಾಸದ ಉಪವಾಸದ ಬಳಿಕ ಶುಕ್ರವಾರ ಹಬ್ಬದ ಆಚರಣೆ ಅಂಗವಾಗಿ ಬ್ರಹ್ಮಾವರ, ಬಾರಕೂರು, ರಂಗನಕೆರೆ, ಹೊನ್ನಾಳ, ಮಟಪಾಡಿ, ಕುಮ್ರಗೋಡು, ಕುಂಜಾಲು ಸೇರಿದಂತೆ ನಾನಾ ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ಪ್ರಾರ್ಥನೆ ನಡೆಯಿತು.
ಕುಂಜಾಲು ನೂರ್ ಜುಮ್ಮಾ ಮಸೀದಿಯ ಖತೀಬರಾದ ಅಬ್ದುಲ್ ವಾಹಿದ್‌ಮದನಿ ಆಲ್‌ಅಝ್ಮರಿ ಸಂದೇಶ ನೀಡಿ, ಎಲ್ಲಾ ಧರ್ಮಗಳು ಬೋಧಿಸಿರುವುದು ಶಾಂತಿ ಮತ್ತು ಪರಸ್ಪರ ಸಹಬಾಳ್ವೆಯಿಂದ ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡುವಂತೆ ಹೇಳಿದೆ ಹೊರತು ಎಲ್ಲಿಯೂ ಜಗಳ ಗುಂಪು ಘರ್ಷಣೆ ರಕ್ತಪಾತವನ್ನು ಹೇಳಿಲ್ಲ ಎಂದರು.
ಮಸೀದಿಯ ಕಮಿಟಿಯ ಅಧ್ಯಕ್ಷ ಮೊಹಮ್ಮದ್ ಶಬ್ಬೀರ್, ಉಪಾಧ್ಯಕ್ಷ ಸುಜಿದ್ ಖಾನ್, ಕಾರ್ಯದರ್ಶಿ ಹುಸೇನಾರ್, ಜೊತೆ ಕಾರ್ಯದರ್ಶಿ ರಶೀದ್, ಖಜಾಂಚಿ ಹಬಿಬ್ ಗೋಳಿಕಟ್ಟೆ ಸೇರಿದಂತೆ ಜಮಾತಿನ ನಾನಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಳಿಕ ಖಬರಸ್ಥಾನದಲ್ಲಿ ಅಗಲಿದ ದಿವ್ಯಾತ್ಮಗಳಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಝಕಾತ್ ಸಂಗ್ರಹಿಸಲಾಯಿತು. ಸಾಮೂಹಿಕ ವಾಗಿ ಸ್ನೇಹದ ಆಲಿಂಗನ ವಿನಿಮಯ ಮಾಡಿಕೊಂಡರು.
PublicNext
21/03/2026 10:54 am
LOADING...